ಒಬಾಮಾ ಆಗಮನಕ್ಕೆ ಕಾದು ನಿಂತಿದೆ ಮುಂಬೈ

ಇಂದು ಮಧ್ಯಾಹ್ನ 12.50ಕ್ಕೆ ವಿಶೇಷ ವಿಮಾನ ಏರ್ ಫೋರ್ಸ್ ಒನ್ ನಲ್ಲಿ ಊಳಿಗದವರೊಂದಿಗೆ ಆಗಮಿಸುತ್ತಿರುವ ಒಬಾಮಾ, 2008ರ ನವೆಂಬರ್ 26ರಂದು ಭಯೋತ್ಪಾದಕ ದಾಳಿ ಈಡಾಗಿದ್ದ ತಾಜ್ ಹೊಟೇಲಿಗೆ ಭೇಟಿ ನೀಡಿ ದಾಳಿಗೆ ತುತ್ತಾದವರ ಕುಟುಂಬದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸಂಜೆ 4.30ಕ್ಕೆ ವಾಣಿಜ್ಯ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಒಬಾಮಾ ಭೇಟಿಯ ಕಾರಣ ಮುಂಬೈ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಇತರ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗುತ್ತಿದೆ. ಅಲ್ಲದೆ, ಅವರು ತಂಗಲಿರುವ ತಾಜ್ ಹೊಟೇಲಿನ ಎಲ್ಲ ಕೋಣೆಗಳನ್ನು ಅವರಿಗಾಗಿಯೇ ಮೀಸಲಿಡಲಾಗಿದೆ.
ದೀಪಾವಳಿಯ ಸಂದರ್ಭದಲ್ಲಿಯೇ ಒಬಾಮಾ ತಮ್ಮ ಪತ್ನಿ ಮಿಷೆಲ್ ಒಬಾಮಾರೊಂದಿಗೆ ಸ್ಥಳೀಯ ಶಾಲಾ ಮಕ್ಕಳೊಂದಿಗೆ ದೀಪ ಬೆಳಗಿಸಿ ಸಂಭ್ರಮ ಆಚರಿಸಲಿದ್ದಾರೆ. ಅಮೆರಿಕದಲ್ಲಿ ಕೂಡ ದೀಪಾವಳಿ ಆಚರಿಸುವ ಪರಿಪಾಠ ಒಬಾಮಾ ಬೆಳೆಸಿಕೊಂಡಿದ್ದಾರೆ. ನಂತರ ಟೌನ್ ಹಾಲ್ ನಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿ ಭಾರತ-ಅಮೆರಿಕ ಬಾಂಧವ್ಯದ ಕುರಿತು ಮಾತನಾಡಲಿದ್ದಾರೆ. ಮುಂಬೈ ಕಾಮಾಟಿಪುರಕ್ಕೆ ಮಿಷೆಲ್ ಭೇಟಿ ನೀಡುವ ಸಂಭವನೀಯತೆ ಇದೆ.
ಭಾನುವಾರ ನ.7ರಂದು ನವದೆಹಲಿಗೆ ತೆರಳಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications