ಏರ್ ಟೆಲ್ ರಾಯಭಾರಿಯಾದ ಸೈನಾ ನೆಹ್ವಾಲ್

ಸೈನಾ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏರ್ ಟೆಲ್ ಕಂಪನಿ ಈಗಾಗಲೇ ಒಂದು ಕೋಟಿ ರುಪಾಯಿ ನೀಡಿದೆ. ಸಚಿನ್ ತೆಂಡುಲ್ಕರ್ ಅವರನ್ನು ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಕ್ರೀಡಾವ್ಯಕ್ತಿ ಸೈನಾ ನೆಹ್ವಾಲ್ ಆಗಿದ್ದಾರೆ.
ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡು ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಸೈನಾಗೆ ವಿವಿಧ ಕಂಪನಿಗಳು ತಮ್ಮ ಜಾಹೀರಾತು ಒಪ್ಪಂದಕ್ಕೆ ಸಹಿ ಮಾಡಬೇಕೆಂದು ಆಹ್ವಾನ ನೀಡಿದೆ.
ಸೈನಾ ವಿಶ್ವ ಮಟ್ಟದ ಇತರ ಪ್ರಮುಖ ನಾಲ್ಕು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಲ್ಲದೇ ಡೆಕ್ಕನ್ ಕ್ರೋನಿಕಲ್ ನ್ಯೂಸ್‌ಪೇಪರ್, ಅಡಾನಿ ವಿಲ್ಮಾರ್ ಪಾರ್ಚೂನ್ ಎಡಿಬಲ್ ಆಯಿಲ್, ಹರ್ಬಾಲೈಫ್ ನ್ಯೂಟ್ರಿಷನಲ್ ಪ್ರೊಡಕ್ಟ್ ರೇಂಜ್ ಕಂಪನಿಗಳ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ.












Click it and Unblock the Notifications