• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಟೋರಿಕ್ಷಾಗಳಿಗೂ ಟೆಕ್ಕಿಗಳಿಗೂ ಅದೇನ್ ನಂಟು!

By Mahesh
|

ಬೆಂಗಳೂರು, ಅ.29: ಸಾಫ್ಟ್ ವೇರ್ ಕ್ಷೇತ್ರದ ವೃತ್ತಿನಿರತರಿಗೂ ನಗರದ ಆಟೋರಿಕ್ಷಾ ಚಾಲಕರಿಗೂ ಅದೇನು ನಂಟೋ ಗೊತ್ತಿಲ್ಲ. ಇಬ್ಬರು ಒಂದರ್ಥದಲ್ಲಿ ಅವರವರ ಕ್ಷೇತ್ರದಲ್ಲಿ ತಂತ್ರಜ್ಞರೇ ಸೈ. ಆಟೋ ಡ್ರೈವರ್ ಚಾಲನೆ ಎಲ್ಲಿ ತೋರುವ ತಂತ್ರಗಾರಿಕೆ, ಟ್ವಿಸ್ಟ್, ಟರ್ನ್, ಬ್ರೇಕ್, ಟೆಕ್ಕಿಗಳ ಕೋಡಿಂಗ್ ಗಿಂತ ಅದ್ಭುತ ಎನ್ನಬಹುದು. ಇದಲ್ಲದೆ, ಇಂಧನಕ್ಕೆ ಸಿಮೇಎಣ್ಣೆ ಎಷ್ಟು ಬಳಸಿದರೆ ಆಟೋ ಚೆನ್ನಾಗಿ ಓಡಿಸಬಹುದು ಎಂಬ ಪ್ರಯೋಗದಲ್ಲಿ ಯಶಸ್ವಿಯಾದ ಚಾಲಕರು, ನಂತರ ಆಟೋ ಮೀಟರ್ ಮೇಲೆ ಕೈಯಾಡಿಸತೊಡಗಿದರು. ಹೊಟ್ಟೆಪಾಡು ಏನು ಮಾಡೋಕೆ ಆಗುತ್ತೆ.

ಸಿಗ್ನಲ್ ಜಂಪ್ ನಂತೆ ಮೀಟರ್ ಕೂಡಾ ಜಂಪ್ ಮಾಡಿಸುವ ಕಲೆ ಒಲಿದೇ ಬಿಟ್ತು. ಟೆಕ್ಕಿಗಳಿಗೆ ಆಫೀಸ್ ಕ್ಯಾಬ್, ಬಸ್ ಜೊತೆಗೆ ಬಿಎಂಟಿಸಿ ಇದ್ದರೂ ಆಟೋ ಮೇಲೆ ಅದೇನೊ ಪ್ರೀತಿ. ವಾರಕ್ಕೊಮ್ಮೆಯಾದರೂ ಆಟೋದವರ ಜೊತೆ ಜಗಳ ಆಡಿ, ಇದ್ದ ಬದ್ದ ಸಿಟ್ಟನ್ನೆಲ್ಲಾ ಲ್ಯಾಪ್ ಟಾಪ್, ಮೊಬೈಲ್ ಮೇಲೆ ತೀರಿಸಿಕೊಂಡು, ಹೊಸ ಹೊಸ ತಂತ್ರಾಶ ಹೊರತಂದು ಆಟೋದವರ ಚಾಲಾಕಿತನ ಬಯಲು ಮಾಡಲು ತೊಡಗಿದಾಗ ಮಾತ್ರ ಮನಸ್ಸಿಗೆ ನೆಮ್ಮದಿ.

ಆಟೋರಿಕ್ಷಾಗಳಲ್ಲಿ ಮೀಟರ್ ಟ್ಯಾಂಪರ್ ಮಾಡಿ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿ ಸಾರ್ವಜನಿಕ ಪ್ರಯಾಣಿಕರನ್ನು ವಂಚಿಸುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಅಧಿಕವಾಗತೊಡಗಿದ ಮೇಲೆ ಇಲಾಖೆ ಎಚ್ಚೆತ್ತುಕೊಂಡಿದೆ. ಸಾರಿಗೆ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಇಂತಹ ಆಟೋರಿಕ್ಷಾಗಳ ಪರಿಶೀಲನೆಗಾಗಿ ಜಂಟಿ ತಪಾಸಣಾ ಕಾರ್ಯವನ್ನು ನಡೆಸಲು ಮುಂದಾಗಿದೆ.

ಬದಲಿ ವ್ಯವಸ್ಥೆ ಸಾಧ್ಯವೇ : ಬೆಂಗಳೂರಿನ ಆಟೋ ಸಮಸ್ಯೆ ನಿವಾರಣೆಗೆ ಬಿಎಂಟಿಸಿ ಟಾಟಾ ನ್ಯಾನೋವನ್ನು ಸಿಟಿ ಟ್ಯಾಕ್ಸಿ ಮಾದರಿಯಲ್ಲಿ ರಸ್ತೆಗಿಳಿಸಲು ಯೋಜನೆ ಹಾಕಿಕೊಂಡಿತ್ತು. ಇನ್ನೂ ಕೆಲವರು ನ್ಯಾನೋ ಬದಲು ರೇವಾ ಎಲೆಕ್ಟ್ರಿಕ್ ಕಾರು ಬಳಸಿ, ಇದರಿಂದ ಸ್ಥಳೀಯ ಬ್ರಾಂಡ್ ವೊಂದಕ್ಕೆ ಪ್ರಚಾರ ಸಿಕ್ಕಿದ್ದಂತಾಗುತ್ತದೆ ಮಾಲಿನ್ಯ ತಡೆಗಟ್ಟುವಲ್ಲಿ ನ್ಯಾನೋ ಹಾಗೂ ಆಟೋಗಿಂತ ರೇವಾ ಸಮರ್ಥವಾಗಿದೆ ಎಂದಿದ್ದರು ಆದರೆ, ಇದೆಲ್ಲಾ ಚರ್ಚೆ ಹಂತದಲ್ಲಿ ದಫನ್ ಆಗಿ ಬಿಟ್ಟಿತು.

ಮೊಬೈಲ್ ನಲ್ಲಿ ಹೊಸ ಮೀಟರ್ ದರ: ನಿಮ್ಮ ಮೊಬೈಲ್ ಜಾವಾ ಆಧಾರಿತವಾಗಿದ್ದರೆ, ಸುಲಭದಲ್ಲಿ ಹೊಸ ಮೀಟರ್ ದರ ಬೆರಳ ತುದಿಗೆ ಸಿಗಲಿದೆ. ಥಾಟ್ಸ್ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿರುವ 32ವರ್ಷದ ಟೆಕ್ಕಿ ಶ್ರೀಕಾಂತ್ ಶೇಷಾದ್ರಿ ರೂಪಿಸಿರುವ ಅಪ್ಲಿಕೇಷನ್ ಬಳಸಿ ಮೊಬೈಲ್ ಫೋನ್ ನಲ್ಲಿ ಆಟೋ ಮೀಟರ್ ದರ ಹಾಕಿ ನಾವು ಕೊಡಬೇಕಾದ ದರವನ್ನು ಕಾಣಬಹುದು. ಆಟೋ ಪರಿಷ್ಕೃತ ದರ ಕನಿಷ್ಠ ಪ್ರಯಾಣ ದರವನ್ನು ರು.14ರಿಂದ 17 ರು.ಗೆ ಏರಿಸಿದ ನಂತರ ಈ ಅಪ್ಲಿಕೇಷನ್ ಹೊರಬಂದಿತು.

ದೂರು ನೀಡಲು ಒಂದಿಷ್ಟು ಮಾರ್ಗ: ಆಟೋ ವಾಚ್ ಎಂಬ ವೆಬ್ ತಾಣವನ್ನು ಆರಂಭಿಸಿರುವ ಸಮಾನಮನಸ್ಕ ನಾಗರೀಕರು, ಆಟೋದವರ ದಬ್ಬಾಳಿಕೆಯನ್ನು ಹತ್ತಿಕ್ಕಲು ಆಂದೋಳನ ನಡೆಸಿದ್ದಾರೆ. ಸ್ವಲ್ಪಮಟ್ಟಿಗೆ ಮೀಟರ್ ಜಾಮ್ ತಂಡದ ವಿಸ್ತೃತ ಯೋಜನೆಯಂತೆ ಇವರ ಕಾರ್ಯಕ್ರಮಗಳು. ಸಾರಿಗೆ ಇಲಾಖೆ ವೆಬ್ ಸೈಟ್ ಗೆ ಕೂಡಾ ಲಿಂಕ್ ನೀಡಲಾಗಿದ್ದು, ಆಟೋರಿಕ್ಷಾ ಚಾಲಕರ ದುರ್ವತನೆ ಹತ್ತಿಕ್ಕಲು ಸುಲಭ ಮಾರ್ಗಗಳಿವೆ ಎನ್ನುತ್ತಾರೆ ಸಂಘಟಕಿ ಸುಧಾ ನಾಯರ್.

ಇದನ್ನು ಬಳಸಿ:

* ಸಾರಿಗೆ ಇಲಾಖೆ ಸಹಾಯವಾಣಿ :080-2225 4900/080-2235 3785

(ಕಚೇರಿ ಸಮಯ 10 ಗಂಟೆಯಿಂದ 5.30 ಗಂಟೆ)

* ವಾಹನ ಸಂಖ್ಯೆ(KA-aa-bb-cdef) ನಮೂದಿಸಿ transcom@kar.nic.in ಇಮೇಲ್ ಕಳಿಸಬಹುದು.

* ಕಾನೂನು ರೀತಿ ಸಮಸ್ಯೆಗಳಿಗೆ cat@kslmd.com or clm@kslmd.com ಗೆ ಮೇಲ್ ಮಾಡಬಹುದು.

* http://bangaloreauto.kiirti.org/ ವೆಬ್ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಜೊತೆಗೆ, ಆಂಡ್ರಾಡ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ ಬಳಸಬಹುದು.

ಇಲಾಖೆ ಸಮಸ್ಯೆ: ನಗರ 10 ಆರ್ ಟಿಒ ಗಳಲ್ಲಿ 70 ಇನ್ಸ್ ಪೆಕ್ಟರ್ ಗಳಿದ್ದು, ಆಟೋರಿಕ್ಷಾದವರ ಚಾಲಾಕಿತನವನ್ನು ಪತ್ತೆಹಚ್ಚಿ ದಾಳಿ ಮಾಡಲು ಸಿಬ್ಬಂದಿ ಕೊರತೆ ಇದೆ. ನಾಗರಿಕರಿಂದ ದೂರು ಬಂದಾಗ, ಕ್ರಮ ಕೈಗೊಳ್ಳುವುದು ಸುಲಭ ಎನ್ನುತ್ತಾರೆ ಸಾರಿಗೆ ಇಲಾಖೆ ಉಪ ಆಯುಕ್ತ ವಿಜಯ ವಿಕ್ರಮ್.

ದಿನಕ್ಕೆ 25 ರಿಂದ 30 ದೂರುಗಳು ದಾಖಲಾಗುತ್ತವೆ. ಇವುಗಳನ್ನು ಬಗೆಹರಿಸಲು ಕನಿಷ್ಠ ಮೂರು ವಾರಗಳ ಕಾಲವಾದರೂ ಹಿಡಿಯುತ್ತದೆ. ಹಲವು ಬಾರಿ 100 ರು ದಂಡ ವಿಧಿಸಿ ಚಾಲಕಿರನ್ನು ಬಿಡಲಾಗುತ್ತದೆ ಎನ್ನುತ್ತಾರೆ.

ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X