ಐದು ವರ್ಷದ ಬಾಲಕಿ ಮೇಲೆ ಎಸ್ಸೆಸೆಲ್ಸಿ ಹುಡ್ಗ ರೇಪ್

ತಂದೆ-ತಾಯಿಗಳಿಂದ ಮಾರಾಟವಾಗಿದ್ದ ಹಾಸನ ಮೂಲದ ಸಾನಿಯಾ(ನಿಜ ನಾಮವಲ್ಲ) (5)ಳನ್ನು ಚಂದ್ರಾ ಲೇಔಟ್‌ನ ಸಾಕಮ್ಮ ಎಂಬವರು ಸಾಕುತಿದ್ದರು. ಸಾಕಮ್ಮನ ಪುತ್ರ ಹದಿನೈದು ವರ್ಷದ ಭರತ್ ಲೈಂಗಿಕ ಕಿರುಕುಳ ನೀಡಿದ್ದು, ಅತ್ಯಾಚಾರವೆಸಗಿದ್ದಾನೆ ಎಂಬ ವಿಷಯ ಅಕ್ಕ ಪಕ್ಕದ ಮನೆಯವರಿಗೆ ತಿಳಿದು, ಮಕ್ಕಳ ಸಹಾಯವಾಣಿಗೆ ವಿಷಯ ಮುಟ್ಟಿಸಿದ್ದಾರೆ. ಬಾಲಕಿಯನ್ನು ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿಂದ ಶಿಶು ವಿಹಾರ ಕೇಂದ್ರಕ್ಕೆ ಸೇರಿಸಲಾಗಿದೆ.
ವಿಕೃತ ಕೃತ್ಯ: ಮಗುವಿನ ಮುಖ, ಮೈ, ತೊಡೆ ಹಾಗೂ ಗುಪ್ತಾಂಗಗಳ ಮೇಲೆ ಕಚ್ಚಿರುವ ಗಾಯದ ಗುರುತುಗಳಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಮಕ್ಕಳ ಸಹಾಯವಾಣಿ ಸದಸ್ಯರು ಹೇಳಿದರು.
ಅನಾಥೆಗೆ ಯಾರು ದಿಕ್ಕು: ಸಾನಿಯಾ ಹುಟ್ಟಿದ 2 ತಿಂಗಳಿಗೆ ಆಕೆಯ ತಂದೆ ಮನೆ ಬಿಟ್ಟು ಹೋದರು. ಆಕೆಯ ತಾಯಿ ಇನ್ನೊಂದು ಮದುವೆಯಾದರು. ಹೊಸ ಅಪ್ಪನಿಗೆ ಹಾಗೂ ತಾತನಿಗೆ ಸಾನಿಯಾಳನ್ನು ಬೇರೆಡೆ ಸಾಗಿಸಿ, ಹಣ ನೀಡಿ ಬೆಳೆಸುವ ಇಚ್ಛೆಯಿತ್ತು. ಅದರಂತೆ, ಪರಿಚಯಸ್ಥೆ ಸಾಕಮ್ಮ ಅವರ ತೆಕ್ಕೆಗೆ ಮಗು ಬಂದಿತು.
ಸ್ಥಳೀಯ ಗಾರ್ಮೆಂಟ್ ನಲ್ಲಿ ಕೆಲಸ ಮಾಡುವ ಸಾಕಮ್ಮ ಪತಿಯನ್ನು ಕಳೆದುಕೊಂಡಿದ್ದು, ಇಬ್ಬರು ಮಕ್ಕಳೊಡನೆ ವಾಸವಾಗಿದ್ದಾರೆ. ಸಾಕಮ್ಮ ನಿತ್ಯದಂತೆ ಕೆಲಸಕ್ಕೆ ಹೋದಾಗ, ಆಕೆಯ ಮಗ, ಬಾಲಕಿಯ ಮೇಲೆ ಕಿರುಕುಳ ಎಸೆಗಿದ್ದಾನೆ. ಈ ಸಂಬಂಧ ವೈದ್ಯಕೀಯ ಪರೀಕ್ಷೆಯನ್ನಾಧರಿಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications