ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಪತಿ ತೆರಿಗೆ ವಿನಾಯತಿ ಅರ್ಜಿ ತಿರಸ್ಕೃತ

By Mahesh
|
Google Oneindia Kannada News

SC rejects tennis ace Mahesh Bhupati's plea
ನವದೆಹಲಿ, ಅ.25: ಬೃಹತ್ ಮೊತ್ತದ ತೆರಿಗೆ ವಿನಾಯತಿ ಕೋರಿ ಟೆನ್ನಿಸ್ ತಾರೆ ಮಹೇಶ್ ಭೂಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಇಂದು(ಅ.25) ತಿರಸ್ಕರಿಸಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಎಸ್ .ಎಚ್ . ಕಪಾಡಿಯಾ ಅವರಿದ್ದ ನ್ಯಾಯಪೀಠವು 36 ವರ್ಷದ ಟೆನ್ನಿಸ್ ಆಟಗಾರ ಭೂಪತಿ ಅವರ ಮನವಿಯನ್ನು ವಜಾಗೊಳಿಸಿದೆ.

ತನ್ನನ್ನು ಅಂತಾರಾಷ್ಟ್ರೀಯ ಆಟಗಾರನನ್ನಾಗಿಸಲು ತರಬೇತಿ ನೀಡಿದ ನನ್ನ ತಂದೆ ಸಿ.ಜಿ, ಕೃಷ್ಣಭೂಪತಿ ಅವರಿಗೆ ತಾವು 28.5 ಲಕ್ಷ ರೂ. ಪಾವತಿಸಿದ್ದು, ಇದನ್ನು ಮರುಪಾವತಿ ಮಾಡಬೇಕು ಎಂದು ಮಹೇಶ್ ಪ್ರತಿಪಾದಿಸಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ ಇದೊಂದು ನಕಲಿ ವ್ಯವಹಾರ ಎಂದು ತೀರ್ಪು ನೀಡಿತ್ತು.

1989-90 ಮತ್ತು 1993-94ರ ನಾಲ್ಕು ವರ್ಷ ಅವಧಿಯಲ್ಲಿ ಈ ಮೊತ್ತ ವೆಚ್ಚ ಮಾಡಲಾಗಿದ್ದು, ತನ್ನ ತಂದೆಯೊಡನೆ ಈ ಬಗ್ಗೆ 1994 ರಲ್ಲಿ ಒಪ್ಪಂದ ಕೂಡಾ ಮಾಡಿಕೊಂಡಿದ್ದೇನೆ. ಆದ್ದರಿಂದ ತೆರಿಗೆ ವಿನಾಯಿತಿ ನೀಡಬೇಕು ಎಂದು ಮಹೇಶ್ ನ್ಯಾಯಾಲಯದ ಮೊರೆ ಹೊಕ್ಕಿದ್ದರು.

ಈ ಕುರಿತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಮಹೇಶ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆದಾಯ ತೆರಿಗೆ ಇಲಾಖೆ ಆದೇಶವನ್ನು ಎತ್ತಿಹಿಡಿದಿದೆ. ತಂದೆ ಹಾಗೂ ಮಗನ ನಡುವಿನ ವ್ಯವಹಾರ ಒಪ್ಪಂದಗಳು ಅಕ್ರಮವಾಗಿದ್ದು, ತೆರಿಗೆ ವಂಚನೆಗೆ ಮಾಡಿಕೊಂಡ ನಕಲಿ ಒಪ್ಪಂದ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು. ಅಲ್ಲದೆ, ಹಿಂದೂ ಸಂಸ್ಕೃತಿ ಪ್ರಕಾರ, ಮಗನಿಗೆ ವಿದ್ಯೆಯನ್ನು ಧಾರೆ ಎರೆಯುವುದು ತಂದೆಯ ಕರ್ತವ್ಯ. ಆದರೆ, ಇಲ್ಲಿ ಅದನ್ನು ವ್ಯವಹಾರಕ್ಕೆ ಇಳಿಸಿರುವುದು ಖಂಡನಾರ್ಹ ಎಂದು ಇಲಾಖೆ ವಾದಿಸಿತ್ತು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X