ಇನ್ಫೋಸಿಸ್ ಗೆ ಹುಸಿ ಬಾಂಬ್ ಕರೆ
ಬೆಂಗಳೂರು,
ಅ. 21 : ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಇನ್ಪೋಸಿಸ್ ಕಂಪನಿಗೆ ಬಾಂಬ್ ಇಟ್ಟಿರುವಂತ ಹುಸಿ ಬಾಂಬ್ ಕರೆ ಬಂದಿರುವ ಘಟನೆ ಬೆಳಕಿಗೆ ಬಂದಿದೆ. id="toptextpromo">ನಗರದ
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕಂಪನಿಗೆ ಬೆಳಗ್ಗೆ 9.30ರ ಸುಮಾರಿಗೆ ದೂರವಾಣಿ ಕರೆ ಬಂದಿದ್ದು, ಕ್ಯಾಂಪಸ್ಸಿನ ಒಳಗಡೆ ಇರಿಸಲಾಗಿದೆ ಎಂದು ಅತ್ತ ಕಡೆಯಿಂದ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ವಿಷಯ ತಿಳಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕ್ಯಾಂಪಸ್ ತಪಾಸಣೆ ನಡೆಸಿದ ನಂತರ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿತು ಎಂದು ಡಿಸಿಪಿ ಬಿಎನ್ಎಸ್ ರೆಡ್ಡಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹುಸಿ
ಬಾಂಬ್ ಇಟ್ಟಿರುವ ಕರೆ ಮಾಡಿರುವ ವ್ಯಕ್ತಿಯ ಬಂಧನಕ್ಕೆ ಜಾಲ ಬೀಸಲಾಗಿದ್ದು, ದೂರವಾಣಿ ಕರೆ ಜೆಪಿ ನಗರದಿಂದ ಬಂದಿದೆ ಎಂಬುದು ತನಿಖೆ ಗೊತ್ತಾಗಿದೆ. ಈ ಪ್ರದೇಶದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಅವರ ಕಚೇರಿ ಮತ್ತು ಬಯೋಕಾನ್ ಕಂಪನಿಗಳಿಗೂ ಇಂತಹ ಹುಸಿ ಬಾಂಬ್ ಕರೆಗಳು ಬಂದಿತ್ತು.











Click it and Unblock the Notifications