ಭಾರತದ ಪ್ರಥಮ ಲೇಸರ್ ನಿಯಂತ್ರಿತ ಬಾಂಬ್

ಡೆಹ್ರಾಡೂನ್ ನಗರದ ಸಾಧನ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಐಆರ್‌ಡಿಇ)ಯ ತಾಂತ್ರಿಕ ಬೆಂಬಲದೊಂದಿಗೆ ಈ ಸಾಧನೆಗೆ ಮುನ್ನುಡಿ ಬರೆಯಲಾಗಿದೆ. ರಕ್ಷಣಾ ವಲಯದಲ್ಲಿ ನಡೆಸುವ ಸಂಶೋಧನೆಯಲ್ಲಿ ಸ್ವಯಂ ಅವಲಂಬನೆ ಸಾಧಿಸುವ ನಿಟ್ಟಿನಲ್ಲಿ ಐಆರ್‌ಡಿಇ(IRDE) ಹಾಗೂ ಡಿಆರ್‌ಡಿಒ(DRDO) ಪ್ರಯೋಗಾಲಯದಲ್ಲಿ ಈ ಆವಿಷ್ಕಾರ ನಡೆಸಿರುವುದಾಗಿ ಐಆರ್ ಡಿಇನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವಿಜ್ಞಾನಿ ತಿಳಿಸಿದ್ದಾರೆ.
ನಿರ್ದಿಷ್ಟ ಗುರಿಯನ್ನು ಸುಲಲಿತವಾಗಿ ತಲುಪಲು ಈ ಎಲ್‌ಜಿಬಿ ಸಾಮರ್ಥ್ಯ ಹೊಂದಿದೆ. ಲೇಸರ್ ಬೆಳಕಿನ ಪ್ರತಿಬಿಂಬದಿಂದ ಗುರಿ ತಲುಪುದು ಸುಲಭವಾಗುವುದಲ್ಲದೆ, ಇದರಿಂದಾಗಿ ಸೂಕ್ತ ಸಂದೇಶಗಳು ಪ್ರಯೋಗಾಲಯಕ್ಕೆ ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಲೇಸರ್ ನಿಯಂತ್ರಿತ ಮೊದಲ ಬಾಂಬನ್ನು ಅಮೆರಿಕ 1960ರಲ್ಲಿ ತಯಾರಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ನಂತರ ರಷ್ಯಾ, ಫ್ರಾನ್ಸ್ ಹಾಗೂ ಬ್ರಿಟನ್ ರಾಷ್ಟ್ರಗಳು ಲೇಸರ್ ಬಾಂಬ್‌ಗೆ ಜೀವ ನೀಡಿದ್ದವು.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications