ಕಾಮನ್ ವೆಲ್ತ್ ಗೇಮ್ಸ್ : 8,000 ಕೋ.ರು ಭ್ರಷ್ಟಾಚಾರ

CWG 2010 logo
ಬೆಂಗಳೂರು, ಅ. 20 : ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆ ವೇಳೆ ನೀಡಲಾಗಿರುವ ಗುತ್ತಿಗೆಯಲ್ಲಿ ಸುಮಾರು 8 ಸಾವಿರ ಕೋಟಿ ರೂ.ವರೆಗೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಕೇಂದ್ರೀಯ ಜಾಗೃತ ಆಯೋಗ ಸಂಶಯ ವ್ಯಕ್ತಪಡಿಸಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಕರ್ಮಕಾಂಡದ ಸಂಬಂಧ ಇದುವರೆಗೂ 20ಕ್ಕೂ ಹೆಚ್ಚು ದೂರುಗಳು ಬಂದಿದ್ದು ಇವುಗಳನ್ನು ಭ್ರಷ್ಟಾಚಾರ ತಡೆ ನಿಗಾ ಸಮಿತಿಯಾದ ಕೇಂದ್ರೀಯ ಜಾಗೃತ ಆಯೋಗದ ಮುಖ್ಯಸ್ಥರಿಗೆ ರವಾನಿಸಲಾಗಿದೆ. ಅಲ್ಲದೇ ಸಂಬಂಧಪಟ್ಟ ಸಚಿವಾಲಯ ಮತ್ತು ಇಲಾಖೆಗಳಿಗೂ ಈ ದೂರುಗಳನ್ನು ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತಾ ಕಾಮಗಾರಿಗಳೊಂದಿಗೆ ಗುರುತಿಸಿಕೊಳ್ಳದ, ಅಸ್ತಿತ್ವದಲ್ಲೇ ಇರದ ಸಂಸ್ಥೆಗಳಿಗೂ ಹಣ ಸಂದಾಯವಾಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಗುತ್ತಿಗೆ ಮಂಜೂರು ಮಾಡಲು ವಿಳಂಬ, ನಿಗದಿಗಿಂತ ಹೆಚ್ಚು ದರ ಸಂದಾಯ, ಮನಸೋ ಇಚ್ಛೆ ಬೆಲೆ ನೀಡಿ ಉಪಕರಣಗಳ ಖರೀದಿ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈಗಿನ ದೂರುಗಳು, ದಾಖಲೆಗಳನ್ನು ಮೇಲ್ನೋಟಕ್ಕೆ ಪರಿಶೀಲಿಸಿದರೆ 6 ರಿಂದ 8 ಸಾವಿರ ಕೋಟಿ ರೂ. ವರೆಗೂ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದೆ. ಇದು ನಿಜಕ್ಕೂ ಭಾರಿ ದೊಡ್ಡ ಮೊತ್ತ ಹಾಗೂ ಎಲ್ಲರಿಗೂ ಮುನ್ನೆಚ್ಚರಿಕೆ ನೀಡುವಂಥ ವಿಷಯ. ಆಯೋಗ ಈಗ ಉಳಿದ ಇಲಾಖೆಗಳ ವರದಿಗಳಿಗಾಗಿ ಕಾಯುತ್ತಿದ್ದು, ಆ ನಂತರ ಸ್ಪಷ್ಟವಾದ ಚಿತ್ರಣ ಹೊರಬೀಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+