ವಿಮಾನದಿಂದ ಇಳಿದ ತಕ್ಷಣ ಮೊಬೈಲ್ ಆನ್
ನವದೆಹಲಿ,
ಅ.19: ವಿಮಾನ ಭೂ ಸ್ಪರ್ಶ ಮಾಡಿದ ಕೂಡಲೇ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳನ್ನು ಉಪಯೋಗಿಸುವುದಕ್ಕೆ ನಾಗರೀಕ ವಿಮಾನಯಾನ ನಿರ್ದೇಶನಾಲಯ(DGCA) ಅವಕಾಶ ಕಲ್ಪಿಸಿದೆ. ಈ ನಿಯಮ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಅನ್ವಯವಾಗಲಿದ್ದು, ಅ.22 ರೊಳಗೆ ಈ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಪ್ರಯಾಣಿಕರು ವಿಮಾನದಿಂದ ಇಳಿದೊಡನೆ ತಮ್ಮ ಆಪ್ತರೊಡನೆ ಮಾತನಾಡಬಹುದು. id="toptextpromo">ವಿಮಾನ
ಭೂ ಸ್ಪರ್ಶ ಮಾಡಿದ ಬಳಿಕ ಮೊಬೈಲ್ ಬಳಕೆ ಮಾಡುವಂತೆ ಪ್ರಯಾಣಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಮೊಬೈಲ್ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಆದರೆ, ಹವಾಮಾನ ವೈಪರೀತ್ಯಗಳಿರುವಾಗ ಈ ನಿಯಮಗಳು ಅನ್ವಯವಾಗುವುದಿಲ್ಲ. id='are-slot-1' class='oiad oi-axt oiadv'> id='top-searched-articles'>ಈ
ಮೊದಲು ವಿಮಾನ ಭೂ ಸ್ಪರ್ಶವಾದ ಬಳಿಕ ವಿಮಾನದ ಬಾಗಿಲುಗಳು ತೆರೆದು, ಪೈಲಟ್‌ನಿಂದ ಆದೇಶ ಬಂದ ನಂತರ ಸಿಬ್ಬಂದಿಗಳು ಹೇಳಿದ ಬಳಿಕ ಮೊಬೈಲ್ ಬಳಸಬೇಕಾಗಿತ್ತು. ಈ ಹೊಸ ನಿಯಮ ಅಕ್ಟೋಬರ್ 22ರಿಂದ ಜಾರಿಗೆ ಬರಲಿದೆ. ಕಳೆದ ತಿಂಗಳು ವಿಮಾನಯಾನ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿದ್ದರು.











Click it and Unblock the Notifications