ಬುರ್ಖಾ ನಿಷೇಧಕ್ಕೆ ಬಾಳಾ ಠಾಕ್ರೆ ಆಗ್ರಹ
ಮುಂಬೈ,
ಅ. 19 : ಎರಡು ತಿಂಗಳ ಹಸುಗೂಸನ್ನು ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಅಪಹರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. id="toptextpromo">ಪಕ್ಷದ
ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಬುರ್ಖಾದಿಂದ ಅಪಾಯ ಇರುವುದಾದರೆ ಅದರ ಬಳಕೆ ಏಕೆ ಎಂದು ಪ್ರಶ್ನಿಸಿರುವ ಬಾಳಾ ಠಾಕ್ರೆ, ಕಾನೂನು ರೀತಿಯಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಬುರ್ಖಾಧಾರಿ ಮಹಿಳೆಯೊಬ್ಬಳು ಎರಡು ತಿಂಗಳ ಹಸುಗೂಸನ್ನು ಅಪಹರಣ ಮಾಡಿರುವ ಘಟನೆಯಿಂದ ತಲೆ ತಗ್ಗಿಸುವಂತಾಗಿದೆ. ಬುರ್ಖಾದಿಂದ ಮಕ್ಕಳ ಜೀವಕ್ಕೆ ಕುತ್ತಿದೆ ಎನ್ನುವುದಾದರೆ, ಇದನ್ನು ನಿಷೇಧಿಸುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಸ್ಲಿಂ
ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಬೇಕು. ಈಗಾಗಲೇ ದೇಶದ ಭದ್ರತಾ ದೃಷ್ಟಿಯಿಂದ ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕ್ಯೂಜಿ ಅವರು ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ಬುರ್ಖಾ ನಿಷೇಧದ ಬಗ್ಗೆ ಚಿಂತನೆ ನಡೆದಿದೆ. ಭಾರತವೂ ಈ ಬಗ್ಗೆ ಗಮನ ಹರಿಸುವುದು ಒಳಿತು ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. ಅ.15ರಂದು ಮುಂಬೈನ ಸಂತಾಕ್ರೂಜ್ ನಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಎರಡು ತಿಂಗಳ ಹಸುಗೂಸನ್ನು ಅಪಹರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.











Click it and Unblock the Notifications