Get Updates
Get notified of breaking news, exclusive insights, and must-see stories!

ಐಸಿಐಸಿಐ ಆನ್ ಲೈನ್ ಬ್ಯಾಂಕಿಂಗ್ ಕನ್ನಡದಲ್ಲೇಕಿಲ್ಲ?

ICICI launches online banking in Hindi
ಮುಂಬೈ, ಅ. 19: ನಿಮ್ಮ ಎಲ್ಲ ಆನ್ ಲೈನ್ ಬ್ಯಾಂಕಿಂಗ್ ವಹಿವಾಟುಗಳನ್ನು ಹಿಂದಿ ಭಾಷೆಯಲ್ಲಿ ಮಾಡಬಹುದು. ಈ ಉದ್ದೇಶಕ್ಕಾಗಿ ನಾವು ನಮ್ಮ ಅಂತರ್ಜಾಲ ತಾಣದಲ್ಲಿ ಸೇವೆಗಳನ್ನು ಹಿಂದಿ ಭಾಷೆ ಮೂಲಕವೇ ಮಾಡಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದಿದೆ ಐಸಿಐಸಿಐ ಬ್ಯಾಂಕ್. ಜಾಲತಾಣದ ವಿಳಾಸ ಇಂತಿದೆ : ಐಸಿಐಸಿಐ ಹಿಂದಿ.

ಅಂತರ್ಜಾಲದ ಮೂಲಕ ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳನ್ನು ನೀಡುವ ವಿಶ್ವದ ಮೊದಲ ಹತ್ತು ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ICICI ತನ್ನ ಗ್ರಾಹಕ ಸಮುದಾಯಕ್ಕೆ ಈ ಮೇಲಿನಂತೆ ಹೇಳಿದೆ. ಇತ್ತೀಚೆಗೆ ಬ್ಯಾಂಕು ತನ್ನ ಹಿಂದಿ ವೆಬ್ ಸೈಟ್ ಅನ್ನು ಮುಂಬೈನಲ್ಲಿ ಅನಾವರಣಗೊಳಿಸಿ ಈ ರೀತಿ ಕರೆಕೊಟ್ಟಿದೆ.

ಇಂಗ್ಲಿಷ್ ನಲ್ಲಿ ಲಭ್ಯವಾಗುತ್ತಿರುವ ಎಲ್ಲಾ ಸೇವೆಗಳನ್ನು ಹಿಂದಿ ಭಾಷೆಯ ತಾಣದಲ್ಲೂ ಪಡೆಯಬಹುದು. ಹಣ ವರ್ಗಾವಣೆ, ಬಿಲ್ ಪಾವತಿ, ನಿಶ್ಚಿತ ಠೇವಣಿ ತೆರೆಯುವುದು, ಚೆಕ್ ಹಾಳೆಗಳಿಗೆ ಬೇಡಿಕೆ ಸಲ್ಲಿಕೆ ಮುಂತಾದ ಅನೇಕ ಸೌಲಭ್ಯಗಳು ಈ ತಾಣದಲ್ಲಿ ಸಿಗತ್ತೆ.

ಪರ್ಸನಲ್ ಬ್ಯಾಂಕಿಂಗ್ ಪುಟಗಳನ್ನು ತಾಣದಲ್ಲಿ ತೆರೆಯಲಾಗಿದೆ. ತಂತ್ರಜ್ಞಾನದ ಲಾಭಗಳನ್ನು ಬಳಸಿಕೊಳ್ಳಲು ಹಿಂದಿ ಭಾಷಿಕರಿಗೆ ನಮ್ಮ ಬ್ಯಾಂಕ್ ಒದಗಿಸುತ್ತಿರುವ ಬಳುವಳಿ ಇದಾಗಿದೆ ಎಂದು ICICI ಸಿಇಒ ಹೇಳಿದ್ದಾರೆ. ಹಿಂದಿ ಭಾಷೆಯಲ್ಲಿ ವ್ಯವಹಾರ ನಿರ್ವಹಿಸುವುದಕ್ಕೆ ಅನುಕೂಲ ಮಾಡಲು ಬ್ಯಾಂಕಿನಲ್ಲಿ ಒಂದು ಪ್ರತ್ಯೇಕ ವಿಭಾಗವನ್ನೇ ಆರಂಭಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳವಲ್ಲಿ ಐಸಿಐಸಿಐ ಬ್ಯಾಂಕ್ ಸಾಕಷ್ಟು ಯಶಸ್ಸು ಕಂಡಿದೆ. ಬೆಂಗಳೂರೂ ಸೇರಿದಂತೆ ರಾಜ್ಯದಲ್ಲಿ ಬ್ಯಾಂಕಿನ 32 ಶಾಖೆಗಳು ಕಾರ್ಯ ನಿರ್ವಹಿಸುತ್ತಿದೆ. ಐಸಿಐಸಿಐ ತನ್ನ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ಎಂದು ಆರಂಭಿಸುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+