ನಮ್ಮ ಹಿರಿಯರು ಎಲ್ಲರಿಗೂ ಆದರ್ಶಪ್ರಾಯ!
ಗುವಾಹತಿ,
ಅ. 18 : ಮೂವತ್ತು ವರ್ಷ ಕಳೆಯಿತೆಂದರೆ ಓದುವ ವಯಸ್ಸು ಮುಗಿಯಿತು ಎನ್ನುವ ಪರಿಸ್ಥಿತಿಯೊಳಗೆ 100 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸ್ವಾತಂತ್ರಯೋಧರೊಬ್ಬರು ಪಿಎಚ್ ಡಿ ಮಾಡಲು ಮುಂದಾಗಿ ಅಚ್ಚರಿ ಮೂಡಿಸಿರುವ ಘಟನೆ ಅಸ್ಸಾಮ್ ನ ಗುವಾಹತಿಯಲ್ಲಿ ನಡೆದಿದೆ. id="toptextpromo">ಸ್ವಾತಂತ್ರ
ಹೋರಾಟಗಾರ ಭೋಲಾರಾಮ್ ದಾಸ್ ಕಳೆದ ವಾರ ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ವಯಸ್ಸಿನಲ್ಲೂ ಅವರು ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿರುವುದು. ಈ ನಿಟ್ಟಿನಲ್ಲಿ ದಾಸ್ ಇದೀಗ ಅಸ್ಸಾಂನ ಗುವಾಹತಿ ವಿಶ್ವ ವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆಯುವುದಕ್ಕಾಗಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಒಂದು ಶತಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಅವರು ಇದೀಗ ಅತ್ಯಂತ ಹಿರಿಯ ವಿವಿ ವಿದ್ಯಾರ್ಥಿಯಾಗಿ ಗುರುತಿಸಲ್ಪಟ್ಟಿದ್ದಾರೆ. ನನ್ನ 100 ವರ್ಷ ಅವಧಿಯಲ್ಲಿ ನಾನು ಸಾಮಾಜಿಕ, ರಾಜಕೀಯ, ಆಡಳಿತ ಮತ್ತು ಧರ್ಮದ ವಿಷಯದಲ್ಲಿ ಬೇಕಾದಷ್ಟು ಸಾಧನೆಗಳನ್ನು ಮಾಡಿದ್ದೇನೆ ಎಂದು ದಾಸ್ ಶನಿವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಹೇಳಿದ್ದರು.











Click it and Unblock the Notifications