ಏಷ್ಯನ್ ಗೇಮ್ಸ್ ನಿಂದ ಸುಶೀಲ್ ಕುಮಾರ್ ಹೊರಗೆ
ನವದೆಹಲಿ,
ಅ. 18 : ಕುತ್ತಿಗೆ ನೋವಿನಿಂದ ಬಳುತ್ತಿರುವ ವಿಶ್ವಚಾಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಮುಂಬರುವ ಏಷ್ಯನ್ ಗೇಮ್ಸ್ ನಿಂದ ಹೊರಗುಳಿಯಲಿದ್ದಾರೆ. id="toptextpromo">ನವೆಬರ್
12 ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ ಗೆ ಭಾರತೀಯ ಕುಸ್ತಿಪಟು ಒಕ್ಕೂಟ ಭಾನುವಾರ ಪ್ರಕಟಿಸಿದ ಕುಸ್ತಿ ತಂಡದಲ್ಲಿ ಸುಶೀಲ್ ಕುಮಾರ್ ಹೆಸರನ್ನು ಕೈಬಿಡಲಾಗಿದೆ. ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದು ನಂತರ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಗೆದ್ದು ಅಚ್ಚರಿ ಮೂಡಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗೆ
ಮುಕ್ತಾಯಗೊಂಡ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗಾಯದ ಸಮಸ್ಯೆಯ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ್ದ ಸುಶೀಲ್ ಕುಮಾರ್ ಚಿನ್ನದ ಪದಕ ಗೆದ್ದು ತವರಿನ ಗೌರವ ಹೆಚ್ಚಿಸಿದ್ದರು. ಸುಶೀಲ್ ಕುಮಾರ್ ಮನವಿ ಮೇರೆಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ಭಾರತದ ಎರಡನೇ ಕ್ರಮಾಂಕದ ಕುಸ್ತಿಪಟು ಪ್ರದೀಪ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಒಕ್ಕೂಟ ಹೇಳಿದೆ.











Click it and Unblock the Notifications