ಕಾಮನ್ ವೆಲ್ತ್ ಕ್ರೀಡೆಗೆ ರಾಹುಲ್ ಉತ್ತಮ ರಾಯಭಾರಿ
ನವದೆಹಲಿ,
ಅ. 4 : ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಕಾಂಗ್ರೆಸ್ ನ ಯುವನೇತಾರ ರಾಹುಲ್ ಗಾಂಧಿ ಅತ್ಯುತ್ತಮ ರಾಯಭಾರಿ ಎಂಬ ಅಭಿಪ್ರಾಯ ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿದೆ. id="toptextpromo">ಕಾಮನ್
ವೆಲ್ತ್ ಕ್ರೀಡಾಕೂಟ ಅತಿಥ್ಯ ವಹಿಸಲು ನಗರ ಬೆಂಗಳೂರು ಎಂಬ ಅಂಶವೂ ಮೂಡಿಬಂದಿದೆ. ವಾಣಿಜ್ಯ ಕೈಗಾರಿಕೆಗಳ ಒಕ್ಕೂಟ ದೇಶದಾದ್ಯಂತ ಸುಮಾರು 10 ಸಾವಿರ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ ನಡೆಸಿದ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ಶೇ. 72 ರಷ್ಟು ಬೆಂಬಲ ವ್ಯಕ್ತವಾಗಿದೆ. ಸಚಿನ್ ತೆಂಡೂಲ್ಕರ್ ಗೆ ಎರಡನೇ ಸ್ಥಾನ, ನಟ ಅಮೀರ್ ಖಾನ್ ಸಂಗೀತ ಮಾಂತ್ರಿಕ ಎ ಆರ್ ರಹೆಮಾನ್ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಟ,
ರಾಜಕಾರಣಿ, ಕ್ರೀಡಾಪಟು ಮತ್ತು ಇತರ ಗಣ್ಯರು ಎಂಬ ನಾಲ್ಕು ವಿಭಾಗದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಎಸಿಸಿಐನ ಸಾಮಾಜಿಕ ಹಿತರಕ್ಷಣಾ ವಿಭಾಗದ ಅಸೋಚಾಮ್ ಸೋಷಿಯಲ್ ಫೌಂಡೇಷನ್ ವತಿಯಿಂದ ದೆಹಲಿ, ಮುಂಬೈ, ಬೆಂಗಳೂರು, ಡೆಹ್ರಾಡೂನ್, ಜೈಪುರ, ಚೆನ್ನೈ, ಅಹಮದಾಬಾದ್, ಚಂಡೀಗಡ್, ಕೋಲ್ಕತ್ತಾ ಮತ್ತು ಭವನೇಶ್ವರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.











Click it and Unblock the Notifications