ಏರ್ ಇಂಡಿಯಾ 901ವಿಮಾನ ತುರ್ತು ಭೂಸ್ಪರ್ಶ
ಕೊಚ್ಚಿ,
ಅ.2: ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಕೊಚ್ಚಿಯಿಂದ ಕೋಜಿಕೋಡ್ ಮೂಲಕ ರಿಯಾದ್‌ಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ 901 ವಿಮಾನ ಕೋಜಿಕೋಡ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ವಿಮಾನದಲ್ಲಿ 197 ಮಂದಿ ಪ್ರಯಾಣಿಕರು ಸೇರಿದಂತೆ 12 ಮಂದಿ ವಿಮಾನ ಸಿಬ್ಬಂದಿಯೂ ಇದ್ದರು. id="toptextpromo"> ಕೋಜಿಕೋಡ್ ನಿಲ್ದಾಣದಿಂದ ವಿಮಾನ ಟೇಕಾಫ್ ಆದ 30 ನಿಮಿಷಗಳಲ್ಲಿ ಸುಮಾರು ಬೆಳಗ್ಗೆ 6.30ರ ಸಮಯದಲ್ಲಿ ಹೊಗೆ ಕಾಣಿಸಿಕೊಂಡಿತು. ಕೂಡಲೆ ಜಾಗೃತರಾದ ಪೈಲಟ್ ವಿಮಾನವನ್ನು ಕೊಚ್ಚಿ ನಿಲ್ದಾಣಕ್ಕೆ ಕೊಂಡೊಯ್ದು ಅಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು ಎನ್ನಲಾಗಿದೆ. ಆಗ ಸಮಯ ಬೆಳಗ್ಗೆ 8.20 ಆಗಿತ್ತು. id='are-slot-1' class='oiad oi-axt oiadv'> id='top-searched-articles'>ಬಳಿಕ
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸಮೀಪದ ಹೋಟೆಲ್‌ಗೆ ಸ್ಥಳಾಂತರಿಸಲಾಯಿತು. ಇಂದು ಸಂಜೆ ವೇಳೆಗೆ ಮತ್ತೊಂದು ವಿಮಾನದಲ್ಲಿ ಎಲ್ಲಾ ಪ್ರಯಾಣಿಕರನ್ನು ರಿಯಾದ್‌ಗೆ ಕಳುಹಿಸಲಾಗುತ್ತದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.











Click it and Unblock the Notifications