ಮುಖೇಶ್ ಅಂಬಾನಿ ನಂಬರ್ 1 ಕುಬೇರ

Mukesh Ambani
ನವದೆಹಲಿ, ಅ. 1 : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ನಂ.1 ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ನಿಯತಕಾಲಿಕ ಹೇಳಿದೆ. ಭಾರತದ 100 ಅತ್ಯಂತ ಶ್ರೀಮಂತರ ಪಟ್ಟಿ ಯನ್ನು ಫೋರ್ಬ್ಸ್ ಬಿಡುಗಡೆಗೊಳಿಸಿದೆ.

ಇದರಲ್ಲಿ ಶತ ಕೋಟ್ಯಧಿಪತಿಗಳಾದ ಎಲ್.ಎನ್ ಮಿತ್ತಲ್, ಅಜೀಮ್ ಪ್ರೇಮ್‌ಜೀ ಮುಂತಾದವರನ್ನು ಮುಕೇಶ್ ಹಿಂದಿಕ್ಕಿದ್ದಾರೆ. ಫೋರ್ಬ್ಸ್ ಪ್ರಕಾರ ಮುಕೇಶ್ ಸಂಪತ್ತು 2700 ಕೋಟಿ ಡಾಲರ್. ನಿಯತಕಾಲಿಕೆಯ ಪ್ರಕಾರ ಭಾರತದ 100 ಸಿರಿವಂತರ ಒಟ್ಟು ಸಂಪತ್ತು 276 ಶತಕೋಟಿ ಡಾಲರ್‌ನಿಂದ 300 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.

ಕಳೆದ ವರ್ಷ 52 ಶತಕೋಟ್ಯಧಿಪತಿಗಳಿದ್ದಿದ್ದರೆ, ಈ ವರ್ಷ 69ಕ್ಕೆ ಏರಿದೆ. ಎರಡನೇ ಸ್ಥಾನದಲ್ಲಿ ಉಕ್ಕು ಉದ್ಯಮದ ದಿಗ್ಗಜ ಲಕ್ಷ್ಮೀ ಮಿತ್ತಲ್ ಇದ್ದಾರೆ. ಅವರ ಸಂಪತ್ತು 26.1 ಶತಕೋಟಿ ಡಾಲರ್. ಹೀಗಿದ್ದರೂ ಇವರಿಬ್ಬರ ನಿವ್ವಳ ಸಂಪತ್ತು ಶೇ.15ರಷ್ಟು ಇಳಿದಿದೆಯಂತೆ. 3ನೇ ಸ್ಥಾನದಲ್ಲಿದ್ದ ಅನಿಲ್ ಅಂಬಾನಿ, 6ನೇ ಸ್ಥಾನಕ್ಕೆ ಇಳಿದಿದ್ದಾರೆ.

ವಿಪ್ರೊ ಮುಖ್ಯಸ್ಥ ಪ್ರೇಮ್‌ಜೀ ಮೂರನೇ ಸ್ಥಾನಕ್ಕೇರಿದ್ದಾರೆ. ಪ್ರೇಮ್‌ಜೀ ಸಂಪತ್ತು 14.9 ಶತಕೋಟಿ ಡಾಲರ್‌ನಿಂದ 17.6 ಶತಕೋಟಿ ಡಾಲರ್‌ಗೆ ಜಿಗಿದಿದೆ. ನಾಲ್ಕನೇ ಸ್ಥಾನದಲ್ಲಿ ಎಸ್ಸಾರ್ ಎನರ್ಜಿಯ ಸೋದರರಾದ ಶಶಿ ಮತ್ತು ರವಿ ರೂಯಿಯಾ ಇದ್ದಾರೆ. ಇವರ ನಿವ್ವಳ ಸಂಪತ್ತು 15 ಶತಕೋಟಿ ಡಾಲರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+