ಅನಿಲ್ ಕುಂಬ್ಳೆ ಎನ್ ಸಿಎ ಚೇರಮನ್
ಮುಂಬೈ,
ಸೆ. 30 : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ನಡೆದ 81 ನೇ ವಾರ್ಷಿಕ ಮಹಾಸಭೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ರವಿ ಶಾಸ್ತ್ರಿ ಅವರಿಂದ ತೆರವಾಗಲಿರುವ ಸ್ಥಾನವನ್ನು ಅನಿಲ್ ಕುಂಬ್ಳೆ ತುಂಬಲಿದ್ದಾರೆ. id="toptextpromo">ಮುಂಬೈಯಲ್ಲಿರುವ
ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಕುಂಬ್ಳೆ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಇದರ ಹೊರತಾಗಿ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ದಿಲೀಪ್ ವೆಂಗ್ ಸರ್ಕಾರ್ ನೇತೃತ್ವದಲ್ಲಿ ಕ್ರಿಕೆಟ್ ಅಭಿವೃದ್ಧಿ ಸಮಿತಿಗೂ ಕುಂಬ್ಳೆ ನೇಮಕಗೊಂಡಿದ್ದಾರೆ. ಅರ್ಷದ್ ಅಯೂಬ್, ಚೇತನ್ ಚೌಹಾನ್, ಪ್ರಣಬ್ ರಾಯ್ ಮತ್ತು ಪ್ರಶಾಂತ್ ವೈದ್ಯ ಈ ಸಮಿತಿಯಲ್ಲಿರುವ ಇತರರು. id='are-slot-1' class='oiad oi-axt oiadv'> id='top-searched-articles'>ಇದರ
ಹೊರತಾಗಿ ಹಣಕಾಸು ಅಧ್ಯಕ್ಷರಾಗಿ ಜ್ಯೋತಿರಾಧಿತ್ಯ ಸಿಂಧಿಯಾ, ಮಾರುಕಟ್ಟೆ ಮುಖ್ಯಸ್ಥರಾಗಿ ಎನ್ ವೆಂಕಟ್ ಸುಂದರಂ ನೇಮಕಗೊಂಡಿದ್ದಾರೆ. ನನ್ನ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸಲಾಗಿದೆ ಎಂದ ಕುಂಬ್ಳೆ, ಈ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕೆ ಸಾಕಷ್ಟು ಸಮಯಬೇಕು. ಮತ್ತು ಸಂಯಮ ಇರಬೇಕು. ಅದೃಷ್ಟವಶಾತ್ ಎನ್ ಸಿಎ ಮತ್ತು ನಾನು ಬೆಂಗಳೂರಿನಲ್ಲೇ ಇರುವುದರಿಂದ ಕೆಲಸ ಸುಲಭವಾಗಲಿದೆ ಎಂದರು.











Click it and Unblock the Notifications