ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ವಿಶಿಷ್ಟ ಗುರುತಿನ ಚೀಟಿ ದೇಶಕ್ಕೆ ಅರ್ಪಣೆ

By Mahesh
|
Google Oneindia Kannada News

UID project launched in Maha village
ಟೆಂಭ್ಲಿ(ಮಹಾರಾಷ್ಟ್ರ), ಸೆ.29: ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶಿಷ್ಟ ಗುರುತಿನ ಚೀಟಿ (UID) 'ಆಧಾರ್' ಗೆ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಬುಡಕಟ್ಟು ಗ್ರಾಮವೊಂದರ 10 ಜನರಿಗೆ ಆಧಾರ್ ಗುರುತಿನ ಚೀಟಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು ವಿತರಿಸಿದರು.

ಹಿಂದುಳಿದ ವರ್ಗದ ಜನರ ಜೀವನಾಡಿಯಾಗಿ ಈ UID ಉಪಯೋಗಕ್ಕೆ ಬರಲಿದೆ ಎಂದು ಮನಮೋಹನ್ ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.

ಬಡವರ ಆಶಾಕಿರಣವಾಗಲಿ ಎಂಬ ಮುಖ್ಯ ಉದ್ದೇಶದಿಂದ ಆಧಾರ್ ಗೆ ಚಾಲನೆ ನೀಡಲಾಗಿದೆ. ಮಹಾರಾಷ್ಟ್ರದ ಬುಡಕಟ್ಟು ಗ್ರಾಮದಲ್ಲಿ ಈ ವಿಶಿಷ್ಟ ಚೀಟಿಗಳನ್ನು ವಿತರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನುಡಿದರು.

ಇಂದು ಆಧಾರ್ ಕಾರ್ಡ್ ಪಡೆದವರಲ್ಲಿ ಐವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಆಧಾರ್ ಕಾರ್ಡ್ ಪಡೆದವರಲ್ಲಿ 4 ವರ್ಷ ವಯಸ್ಸಿನ ಹಿತೇಶ್ ಸೋನಾವಾನೆ ಹಾಗೂ 8 ವರ್ಷದ ಅನಿಲ್ ಥಾಕ್ರೆ ಅತ್ಯಂತ ಕಿರಿಯ ವಯಸ್ಕರಾಗಿದ್ದಾರೆ.

PDS ಹಾಗೂ NREGSಮುಂತಾದ ಸರ್ಕಾರದ ಯೋಜನೆಗಳ ಲಾಭ ಪಡೆಯಲು12 ಅಂಕಿಗಳ ಈ ವಿಶಿಷ್ಟಗುರುತಿನ ಚೀಟಿ ಬಡವರಿಗೆ ಸಹಾಯಕವಾಗಲಿದೆ.

ಆಧಾರ್ ಯೋಜನೆಯ ಮುಖ್ಯ ರುವಾರಿ ನಂದನ್ ನಿಲೇಕಣಿ, ಮಹಾರಾಷ್ಟ್ರ ಸಿಎಂ ಅಶೋಕ್ ಚವಾಣ್, ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಸೇರಿದಂತೆ ಅನೇಕ ಗಣ್ಯರು ಸಂದರ್ಭದಲ್ಲಿ ಹಾಜರಿದ್ದರು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X