ಗೂಗಲ್ 12 ನೇ ಹುಟ್ಟುಹಬ್ಬಕ್ಕೆ ಕೇಕ್ ಡೂಡ್ಲ್

Google celebrates birthday with new doodle
ಕ್ಯಾಲಿಫೋರ್ನಿಯಾ, ಸೆ.27: ಸರ್ಚ್ ಇಂಜಿನ್ ಲೋಕದ ದಿಗ್ಗಜ ಗೂಗಲ್ ಸಂಸ್ಥೆ ಇಂದು(ಸೆ.27) ತನ್ನ 12ನೇ ಹುಟ್ಟುಹಬ್ಬವನ್ನು ಹೊಸ ಗೂಗಲ್ ಡೂಡ್ಲ್ ಮೂಲಕ ಆಚರಿಸುತ್ತಿದೆ. ಅಂತರ್ಜಾಲ ಸಂಬಂಧಿತ ಅನೇಕಾನೇಕ ಸೇವೆ ಹಾಗೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಗೂಗಲ್ ಗೆ ಸಲ್ಲುತ್ತದೆ. ಹುಟ್ಟುಹಬ್ಬದ ಶುಭಸಂದರ್ಭಕ್ಕಾಗಿ ಹೊಸ ಕೇಕ್ ಮಾದರಿ ಡೂಡ್ಲ್ ಚಿತ್ರವನ್ನು ಲಾಸ್ ಏಂಜಲೀಸ್ ನ 89 ವರ್ಷದ ಕಲಾವಿದ ವೇಯ್ನ್ ಥೈಬಾಡ್ ರಚಿಸಿದ್ದಾರೆ.

25 ನೇ ವಾರ್ಷಿಕೋತ್ಸವದಂದು ಬಳಸಿದ 'Bucky Ball" ಡೂಡ್ಲ್ ಚಿತ್ರಕ್ಕಿಂತ ತೀರಾ ಸರಳವಾದ ಡೂಡ್ಲ್ ಅನ್ನು ಈ ಬಾರಿ ಹುಟ್ಟ್ಟುಹಬ್ಬದಂದು ಪ್ರದರ್ಶಿಸಲಾಗುತ್ತಿದೆ. ಡೂಡ್ಲ್ ನಲ್ಲಿ ಗೂಗಲ್ ಪದದಲ್ಲಿ 'L' ಅಕ್ಷರದ ಬದಲಿಗೆ ಬರ್ಥ್ ಡೇ ಕ್ಯಾಂಡಲ್ ಇರಿಸಲಾಗಿದೆ. ನ್ಯೂಯಾರ್ಕ್ ನ ವಿಷ್ಯುಯಲ್ ಆರ್ಟ್ಸ್ ಅಂಡ್ ಗ್ಯಾಲರೀಸ್ ಅಸೋಸಿಯೇಷನ್ (VAGA) ಅನುಮತಿ ಪಡೆದು ಥೈಬಾಡ್ ಅವರ ಕಲಾಚಿತ್ರವನ್ನು ಬಳಸಿಕೊಳ್ಳಲಾಗಿದೆ. 50 ಹಾಗೂ 60 ರ ದಶಕಗಳಲ್ಲಿ ಕಲಾವಿದ ಥೈಬಾಡ್ ರಚಿಸಿದ್ದ ಅನೇಕ ಕೇಕ್ ಪೈಂಟಿಂಗ್ ಗಳು ಜನಪ್ರಿಯತೆ ಗಳಿಸಿವೆ.

ಸೆ.4, 1998ರಲ್ಲಿ ಸ್ಟಾಡ್ ಫೋರ್ಡ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಗೆಬ್ರಿನ್ ಅವರು ಇಂಟೆರ್ ನೆಟ್ ನಲ್ಲಿ ಹುಡುಕುವಿಕೆಯನ್ನು ಸುಧಾರಣೆಗೊಳಿಸಲು ಗೂಗಲ್ ಎಂಬ ಹೊಸ ಸಂಸ್ಥೆ ಹುಟ್ಟುಹಾಕಿದರು. ಹೊಸ ಡೂಡ್ಲ್ ಚಿತ್ರದೊಂದಿಗೆ ಸೆ.27 ರಂದು ತನ್ನ ವಾರ್ಷಿಕೋತ್ಸವ ಗೂಗಲ್ ಆಚರಿಸುತ್ತದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+