ಮಳವಳ್ಳಿ ಎಸ್ ಬಿಎಂ ಬ್ಯಾಂಕ್ ನಲ್ಲಿ ಖೋಟಾ ನೋಟ್

ಬಹುಶಃ ಆರ್.ಬಿ.ಐನ ಬೆಂಗಳೂರು ಕೇಂದ್ರೀಯ ತಪಾಸಣಾ ಅಧಿಕಾರಿಗಳು ತಪಾಸಣೆ ನಡೆಸದೆ ಹೋಗಿದ್ದರೆ ಈ ನೋಟುಗಳು ಬೆಳಕಿಗೆ ಬರುತ್ತಿರಲಿಲ್ಲವೇನೋ? ಶನಿವಾರ ಮಳವಳ್ಳಿ ಪಟ್ಟಣದ ಎಸ್‌ಬಿಎಂ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದ ಕೇಂದ್ರೀಯ ತಪಾಸಣಾ ಅಧಿಕಾರಿಗಳಿಗೆ ಬ್ಯಾಂಕ್‌ನ ಸ್ಟ್ರಾಂಗ್ ರೂಂನಲ್ಲಿದ್ದ ನೋಟುಗಳ ಕಂತೆಯಲ್ಲಿ ಒಂದು ಕಂತೆಯಲ್ಲಿ 500 ರೂ. ಮುಖಬೆಲೆಯ 48 ನೋಟುಗಳು, 1000 ರೂ. ಬಂಡಲ್‌ನಲ್ಲಿ 12 ನೋಟುಗಳು ಪತ್ತೆಯಾಗಿವೆ.
ಆದರೆ ಈ ಖೋಟಾನೋಟುಗಳು ಅಸಲಿ ನೋಟುಗಳೊಂದಿಗೆ ಹೇಗೆ ಸೇರ್ಪಡೆಗೊಂಡವು ಎಂಬುದೇ ಚಿದಂಬರ ರಹಸ್ಯವಾಗಿದೆ. ಖೋಟಾನೋಟುಗಳು ಪತ್ತೆಯಾದ ನಂತರ ಬ್ಯಾಂಕ್‌ನ ಮ್ಯಾನೇಜರ್ ಎ.ಹರೀಶ್ ಮಳವಳ್ಳಿ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಬ್ಯಾಂಕ್‌ನಲ್ಲಿ ಖೋಟಾನೋಟು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ತನಿಖೆಯಿಂದ ರಹಸ್ಯ ಹೊರಬರಬಹುದೇ ಕಾದು ನೋಡಬೇಕಿದೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ











Click it and Unblock the Notifications