ಸೃಷ್ಟಿ ವೈಚಿತ್ರ :ಸ್ಪೈಡರ್ ಮ್ಯಾನ್ ಅಲ್ಲ ವುಮನ್....

ತಾವು ಹೆಣೆಯುವ ಸುಂದರ ಬಲೆಯನ್ನು ನೋಡಿ ಯಾವುದಾದರು ಕ್ರಿಮಿಕೀಟ ಬಂದರೆ (ಬಿದ್ದರೆ) ಅದನ್ನು ಚಕ್ಕನೆ ಹಿಡಿದು ಬಾಯಿಯೊಳಗೆ ಹಾಕಿಕೊಳ್ಳುವುದು ಇವುಗಳ ಕೆಲಸ. ಇಂತಹ ಜೇಡಗಳು ಕೆಲವೊಮ್ಮೆ ತಮ್ಮ ಶತ್ರು ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ತಮ್ಮ ನೈಜ ಅವತಾರವನ್ನೇ ಬದಲಾಯಿಸಿ ಬಿಡುವುದಿದೆ. ಮೇಲ್ಕಂಡ ಜೇಡವನ್ನೊಮ್ಮೆ ಗಮನಿಸಿ. ಒಮ್ಮೆಗೆ ನೋಡಿದರೆ ಮಹಿಳೆಯ ಮುಖವನ್ನು ಹೋಲುತ್ತದೆ.
ಇದರಿಂದ ತನ್ನ ಶತ್ರುಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಶತ್ರು ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ದೇವರು ಇಂತಹ ರೀತಿಯ ಅವತಾರವನ್ನು ಜೇಡಕ್ಕೆ ನೀಡಿರಬಹುದು ಆದರೆ ನೋಡುಗರಿಗೆ ಮಾತ್ರ ಇದೊಂದು ಸೋಜಿಗವೇ ಸರಿ. ಅಂದಹಾಗೆ ಇದು ಪತ್ತೆಯಾಗಿದ್ದು ಹೆಚ್.ಡಿ.ಕೋಟೆಯ ಹಳ್ಳಿಯೊಂದರಲ್ಲಿ. ಇದನ್ನು ನೋಡಿದ ಆಯಿಲ್ ಚಂದ್ರ ಮತ್ತು ಮುಜಾಹಿದ್ ಎಂಬುವವರು ಛಾಯಾಗ್ರಾಹಕ ಮನೋಜ್ ಕೋಟೆ ಅವರಿಗೆ ತಿಳಿಸಿದ ಮೇರೆಗೆ ಈ ಚಿತ್ರ ತೆಗೆಯಲಾಗಿದೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ












Click it and Unblock the Notifications