ಕಾಮನ್ ವೆಲ್ತ್ ಕೂಟದ ಹಕ್ಕಿಗೆ ಕೊಟ್ಟ ರೊಕ್ಕ ಎಷ್ಟು?
ಮೆಲ್ಬೂರ್ನ್,
ಸೆ. 24 : ನೂರೆಂಟು ವಿಘ್ನಗಳು ಮತ್ತು ಹಗರಣಗಳ ಕೂಪವಾಗಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಮೇಲೆ ಇದೀಗ ಮತ್ತೊಂದು ಗಂಭೀರ ಆರೋಪ ಎದುರಾಗಿದೆ. 19ನೇ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಸಲು ಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ದೇಶಗಳಿಗೆ ಭಾರತ ಲಂಚ ನೀಡಿ ಕ್ರೀಡಾಕೂಟ ನಡೆಸುವ ಹಕ್ಕನ್ನು ಪಡೆದುಕೊಂಡಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ. id="toptextpromo">19
ನೇ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಸಲು ಭಾರತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸುಮಾರು 72 ದೇಶಗಳಿಗೂ ತಲಾ 1 ಲಕ್ಷ ಡಾಲರ್ ಹಣ ನೀಡಿ ಕ್ರೀಡಾಕೂಟ ನಡೆಸುವ ಹಕ್ಕನ್ನು ಪಡೆದುಕೊಂಡಿದೆ ಎಂದು ಆಸ್ಟ್ರೇಲಿಯಾದ ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. 18 ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಕೊನೆಯ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ಪತ್ರಿಕೆ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಅ.3
ರಿಂದ 14ರ ವರೆಗೆ ನವದೆಹಲಿಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟಗಳು ನಡೆಯಲಿವೆ. ಈಗಾಗಲೇ ವಿವಿಧ ದೇಶಗಳಿಂದ ಅನೇಕ ಕ್ರೀಡಾಪಟುಗಳು ಭಾರತಕ್ಕೆ ಆಗಮಿಸಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಬೇಕಿರುವ ಸಕಲ ವ್ಯವಸ್ಥೆ ಕಾರ್ಯ ಮುಂದುವರೆದಿದೆ. ಈ ಮಧ್ಯೆ ಕಾಮನ್ ವೆಲ್ತ್ ಕ್ರೀಡಾಕೂಟದ ಮುಖ್ಯದ್ವಾರ ನೆಹರು ಮೈದಾನದ ಮೆಲ್ಸೇತುವೆ ಕುಸಿದು ಬೀಳುವ ಮೂಲಕ ವ್ಯಾಪಕ ಟೀಕೆಗೂ ಗುರಿಯಾಗಿದೆ. ಇದೀಗ ಈ ಎಲ್ಲ ಆರೋಪಗಳ ನಡುವೆ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಸಲು ಭಾರತ ಇತರ ದೇಶಗಳಿಗೆ ಲಂಚ ನೀಡಿರುವುದು ಬಹಿರಂಗಗೊಂಡಿರುವುದು ತೀವ್ರ ಕೋಲಾಹಲ ಉಂಟು ಮಾಡಿದೆ.











Click it and Unblock the Notifications