ಕಾಮನ್ ವೆಲ್ತ್ ಕ್ರೀಡಾಕೂಟ : ಮೇಲ್ಸೇತುವೆ ಕುಸಿತ
ನವದೆಹಲಿ,
ಸೆ.22 : ಕಾಮನ್ವೆಲ್ತ್ ಕ್ರೀಡಾಕೂಟದ ಮುಖ್ಯ ವೇದಿಕೆ ಜವಾಹರಲಾಲ್ ನೆಹರೂ ಕ್ರೀಡಾಂಗಣದ ಬಳಿ ಮಂಗಳವಾರ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಕುಸಿದು 27 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದೆ. id="toptextpromo">ದುರ್ಘಟನೆ
ಸಂಭವಿಸಿದಾಗ ಕಾರ್ಮಿಕರು ಪಾದಚಾರಿ ಮೇಲ್ಸೇತುವೆಯ ಭಾಗವೊಂದಕ್ಕೆ ಕಾಂಕ್ರೀಟ್ ಮಿಶ್ರಣವನ್ನು ಹಾಕುತ್ತಿದ್ದರು. 25 ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯ ಗೊಂಡಿರುವ ಐವರನ್ನು ಸಪ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯು ಕ್ರೀಡಾಂಗಣದ ಪ್ರಮುಖ ಆಕರ್ಷಣೆಯಾಗಿದ್ದು, ಎಲ್ಲ ದ್ವಾರಗಳಿಂದಲೂ ವಾಹನ ನಿಲುಗಡೆ ಪ್ರದೇಶಕ್ಕೆ ಸಂಪರ್ಕವೊಂದಿದೆ. id='are-slot-1' class='oiad oi-axt oiadv'> id='top-searched-articles'>ಮಂಗಳವಾರ
ಮಧ್ಯಾಹ್ನ 3.10ರ ವೇಳೆಗೆ ಈ ಸೇತುವೆ ಕುಸಿದಿದೆ. ಇದೇ ಸ್ಥಳದಲ್ಲಿ ಕಾಮನ್ ವೆಲ್ತ್ ಗೇಮ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರದಂದು ಕ್ರೀಡಾಂಗಣದ ಬಳಿ ನಿರ್ಮಿಸುತ್ತಿರುವ 95 ಅಡಿ ಉದ್ದದ ತೂಗು ಸೇತುವೆಯೊಂದು ಕುಸಿದು ಓರ್ವ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ, ಮತ್ತೊಬ್ಬ ಪೊಲೀಸ್ ಗಾಯಗೊಂಡಿದ್ದರು.











Click it and Unblock the Notifications