ನವದೆಹಲಿ, ಸೆ.21: ಭಾರತೀಯ ತೈಲ ನಿಗಮವು ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್‌ನ ಬೆಲೆಯನ್ನು ಲೀ.ಗೆ 27 ಪೈಸೆಯಷ್ಟು ಹೆಚ್ಚಿಸಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಇನ್ನೂ ಬೆಲೆ ಹೆಚ್ಚಳದ ಬಗ್ಗೆ ಮಾತಾಡಿಲ್ಲ. ಆದರೆ, ಇನ್ನೆರಡು ದಿನಗಳಲ್ಲಿ ಪರಿಷ್ಕೃತ ದರವನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಹೆಚ್ಚಳದ ಬಳಿಕ ದೇಶದ ನಾಲ್ಕು ಮಹಾ ನಗರಗಳಲ್ಲಿ ಪೆಟ್ರೋಲ್‌ನ ಬೆಲೆ ಈ ಕೆಳಗಿನಂತಿರುತ್ತದೆ.
ನಗರ- ಹಿಂದಿನಬೆಲೆರೂ./ಲೀ.-ಹೊಸ ಬೆಲೆ ರೂ./ಲೀ.-ಹೆಚ್ಚಳ ರೂ./ಲೀ.
ದೆಹಲಿ>>51.61>>51.83>>0.27
ಮುಂಬೈ>>55.97>>56.25>>0.28
ಕೋಲ್ಕತಾ>>55.40>>55.69>>0.29
ಚೆನ್ನೈ>>56.02>>56.31>>0.29