ಚಂದ್ರಾವತಿ ಬಟ್ಟೆ ಮೇಲೆ ಹಾಲಪ್ಪನ ವೀರ್ಯ

ಹೈದರಾಬಾದಿನ CDFD ಕೇಂದ್ರ ವರದಿ ಪ್ರಕಾರ 'ಹಾಲಪ್ಪ ಹಾಗೂ ಚಂದ್ರಾವತಿ ಅವರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಚಂದ್ರಾವತಿ ವಿಡಿಯೋ ತುಣುಕಿನಲ್ಲಿ ತೋರಿಸಿರುವ ಬಟ್ಟೆಯಲ್ಲಿದ್ದ ವೀರ್ಯದ ಕಲೆ ಹಾಲಪ್ಪ ಅವರದ್ದು ಎಂದು ತಿಳಿದುಬಂದಿದೆ. ಅಲ್ಲದೆ. ಚಂದ್ರಾವತಿ ಹಾಗೂ ಹಾಲಪ್ಪ ಅವರ ನಡುವೆ ದೈಹಿಕ ಸಂಪರ್ಕ ನಡೆದಿದ್ದು ನಿಜ ಎಂದು ಹೇಳಲಾಗಿದೆ.
ಆದರೆ, ಪರಸ್ಪರ ಒಪ್ಪಂದದಿಂದ ದೈಹಿಕ ಸಂರ್ಪಕ ಸಾಧ್ಯವಾಯಿತೇ ಅಥವಾ ಹಾಲಪ್ಪ ಅವರು ಚಂದ್ರಾವತಿಯ ಮೇಲೆ ಅತ್ಯಾಚಾರ ಎಸೆಗಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವೇಳೆ ಅತ್ಯಾಚಾರದ ಆರೋಪ ಸಾಬೀತಾದರೆ, ಹಾಲಪ್ಪನವರಿಗೆ 14 ವರ್ಷ ಸೆರೆಮನೆ ವಾಸ ಖಂಡಿತ.ಒಪ್ಪಂದದ ದೈಹಿಕ ಸಂಪರ್ಕವಾದರೆ ಚಂದ್ರಾವತಿಯ ಗಂಡ ಅಥವಾ ಹಾಲಪ್ಪನವರ ಹೆಂಡತಿ ಇಚ್ಛಿಸಿದರೆ ಹೊಸ ದೂರು ನೀಡಬೇಕಾಗುತ್ತದೆ.
ಮೇ ತಿಂಗಳಿನಲ್ಲಿ ಆಹಾರ ಮತ್ತು ನಾಗರೀಕ ಸೌಲಭ್ಯ ಖಾತೆಗೆ ರಾಜೀನಾಮೆ ನೀಡಿ ಸಿಂಗದೂರಿನ ಅಮ್ಮನ ಕೃಪೆಯೊಂದಿಗೆ ಆರೋಗ್ಯವಾಗಿ ಸ್ವಂತ ಊರಲ್ಲಿ ಕಾಲದೂಡುತ್ತಿರುವ ಹಾಲಪ್ಪ ಅವರಿಗೆ ಈ ಸುದ್ದಿಯಿಂದ ಶಾಕ್ ಆಗಿದೆಯಂತೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡಲು ಇನ್ನೂ ಮುಂದೆ ಬಂದಿಲ್ಲ.











Click it and Unblock the Notifications