ಜಗದೇಕಮಲ್ಲ ಸುಶೀಲ್ ನಂ.1 ಕುಸ್ತಿ ಪಟು

Sushil Kumar is World wrestling champion
ಮಾಸ್ಕೋ, ಸೆ.13: ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.ಮಾಸ್ಕೋದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಸುಶೀಲ್ ಕುಮಾರ್ ರಶ್ಯಾದ ಗೊಗೇವ್ ಅಲನ್‌ರನ್ನು 3-1ಅಂಕದಿಂದ ಸೋಲಿಸಿದರು. ಮೊದಲ ಸುತ್ತಿನ ಹಣಾಹಣಿಯಲ್ಲಿ ಎದುರಾಳಿ ಕೇವಲ ಒಂದು ಅಂಕವನ್ನಷ್ಟೇ ಪಡೆದುಕೊಳ್ಳಲು ಸಫಲರಾಗಿದ್ದರು.

ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ಆದರೆ ಎರಡನೇ ಸುತ್ತಿನಲ್ಲಿ ರಶ್ಯಾದ ಗೊಗೇವ್ ಮೇಲೆ ಹೆಚ್ಚು ಬಲ ಪ್ರಯೋಗ ಹೇರಿದ ಸುಶೀಲ್ ಮತ್ತೊಂದು ಅಂಕವನ್ನು ಗಳಿಸುವುದರೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.ಈ ಹಿಂದೆ, ಸುಶೀಲ್ ಕುಮಾರ್ ಅಜೆರ್‌ಬೈಜಾನ್‌ನ ಹಸನೋವ್ ಜಬ್ರಾಯಿಲ್‌ರನ್ನು 4-3 ಅಂಕದಿಂದ ಸೋಲಿಸಿದರು. ವಿಶ್ವಮಟ್ಟದ ಪಂದ್ಯವೊಂದರಲ್ಲಿ ಗಳಿಸಿದ ಚೊಚ್ಚಲ ಚಿನ್ನದ ಪದಕವೊಂದಾಗಿದೆ.

27 ವರ್ಷದ ಭಾರತದ ಹೆಮ್ಮೆಯ ಕುಸ್ತಿಪಟು ಸುಶೀಲ್ , ಏಷ್ಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲೂ ಪದಕ ಗಳಿಸಿದ್ದಾರೆ. ಮುಂಬರುವ ಕಾಮನ್ ವೆಲ್ತ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸವನ್ನು ಸುಶೀಲ್ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+