ರು. 15ಕ್ಕೆ ಕಂಪ್ಯೂಟರ್ ಬಾಡಿಗೆಗೆ ಸಿಗಲಿದೆ
ನವದೆಹಲಿ,
ಸೆ.12: ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಸಾಕ್ಷರತೆ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದು, ದಿನವೊಂದಕ್ಕೆ ಕೇವಲ 15 ರುಗಳಲ್ಲಿ ನೀಡಿ ಕಂಪ್ಯೂಟರ್ ತೆಗೆದುಕೊಂಡು ಮನೆಯಲ್ಲಿ ಕೂತು ನಲಿ ಕಲಿ ಎಂದು ಸಂಭ್ರಮಿಸಬಹುದಾಗಿದೆ. id="toptextpromo">ವಿಡಿಯೋ
ಪಾರ್ಲರ್ ನಿಂದ ನೆಚ್ಚಿನ ಸಿಡಿ ಪಡೆದು ಸಿನಿಮಾ ನೋಡುವಂತೆ ಗಣಕಗಳನ್ನು ಇನ್ಮುಂದೆ ಬಾಡಿಗೆಗೆ ಪಡೆದು ಜ್ಞಾನ ವೃದ್ಧಿ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರದ ಮಾಹಿತಿ ತಂತ್ರಜ್ಞಾನ ಹಾಗೂ ಕಮ್ಯೂನಿಕೇಷನ್ ಇಲಾಖೆಯ ಈ ಯೋಜನೆ ಸಾಕಾರಗೊಳಿಸಲು ಪ್ರಮುಖ ಐಟಿ ಕಂಪೆನಿಗಳೊಂದಿಗೆ ಸರ್ಕಾರ ಈಗಾಗಲೆ ಮಾತುಕತೆ ನಡೆಸಿದೆ. ಅವುಗಳಲ್ಲಿ ಎಚ್ ಸಿಎಲ್ ಇನ್ಫೋ ಸಿಸ್ಟಮ್ಸ್ ಪ್ರಮುಖವಾದದು. id='are-slot-1' class='oiad oi-axt oiadv'> id='top-searched-articles'>ಸುಮಾರು
45 ಲಕ್ಷ ವೆಚ್ಚದ ಈ ಯೋಜನೆಯ ಹೊಣೆಯನ್ನು ಯಾವ ಕಂಪೆನಿಗೆ ಸರ್ಕಾರ ವಹಿಸುವುದು ಎಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಗಣಕ ಸೌಲ ಭ್ಯ ಒದಗಿಸುವ ಮೂಲಕ ಜನಮೆಚ್ಚುಗೆಯ ಕಾರ್ಯಕ್ಕೆ ಐಟಿ ಸಚಿವಾಲಯ ಮುಂದಾಗಿದೆ.











Click it and Unblock the Notifications