ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲೆ ನವೀನಾ ಕೊಲೆ ಪ್ರೇಮಿ ರಾಜಪ್ಪ ಸೆರೆ

By Mahesh
|
Google Oneindia Kannada News

Advocate Naveena Murder Case
ಬೆಂಗಳೂರು, ಸೆ. 9:ರಾಜ್ಯದ ಉಚ್ಚ ನ್ಯಾಯಾಲಯದ ಆವರಣದಲ್ಲಿ ಮಟ ಮಟ ಮಧ್ಯಾಹನ ವಕೀಲೆ ನವೀನಾ ಶ್ರೀನಿವಾಸ್ ರೆಡ್ಡಿಯನ್ನು ಕೊಲೆಗೈದಿದ್ದ ಪಾಗಲ್ ಪ್ರೇಮಿ ಅಡ್ವೋಕೇಟ್ ರಾಜಪ್ಪನನ್ನು ವಿಧಾನಸೌಧ ಥಾಣಾ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿ ರಾಜಪ್ಪನನ್ನು ನಗರದ ಎಂಟನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಯನ್ನು 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂತಿದ್ದಾನೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜಪ್ಪ ಗುಣಮುಖನಾದ ಮೇಲೆ ಪೊಲೀಸರು ಕೋಳ ತೊಡೆಸಿ ಕರೆ ತಂದಿದ್ದಾರೆ. ಜುಲೈ 8 ರಂದು ವಕೀಲೆ ನವೀನಾ ಶ್ರೀನಿವಾಸ್ ರೆಡ್ಡಿ ಅವರನ್ನು ಕೊಲೆಗೈದ ನಂತರ ತಾನು ಟಾಯ್ಲೆಟ್ ನಲ್ಲಿ ಅಡಗಿ ಕೂತು ವಿಷ ಸೇವಿಸಿ, ಅದೇ ಚಾಕುವಿನಿಂದ ಆತ್ಮಹತ್ಯೆಗೆ ವಿಫಲ ಯತ್ನ ಮಾಡಿದ್ದ.

ಒನ್ ಸೈಡ್ ಭಗ್ನ ಪ್ರೇಮಿಕಥೆ ?:ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜಪ್ಪನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಕೋಲಾರ ಕಾನೂನು ಕಾಲೇಜಿನಲ್ಲಿ ಹಿಡಿದು ಬೆಂಗಳೂರಿನ ಹೈ ಕೋರ್ಟ್ ವರೆಗೂ ನಡೆದ ಒನ್ ಸೈಡ್ ಪ್ರೇಮಕಥೆಯನ್ನು ಪೊಲೀಸರಿಗೆ ಸವಿಸ್ತಾರವಾಗಿ ಹೇಳಿರುವ ರಾಜಪ್ಪ, ಕೊಲೆ ಮಾಡಿದ್ದು ಯಾಕೆ ಎಂದರೆ ಮೌನವಾಗಿಬಿಡುತ್ತಾನೆ.

ನವೀನಾಳ ಅಣ್ಣನಿಗೆ ಅಪಘಾತವಾಗಿತ್ತು ಅದಕ್ಕೆ ರಾಜಪ್ಪನಿಗೆ ಲೋನ್ ಪಡೆದು ದುಡ್ಡು ನೀಡಿದ್ದ, ನವೀನಾ ಜೊತೆ ಮದುವೆ ಒಂದೇ ಬಾಕಿ ಇದ್ದದ್ದು ಅದರ್ಶ ಸತಿ ಪತಿಗಳಂತೆ ಇದ್ದೆವು. ಆದರೆ ಆಕೆ ಅಡ್ವೋಕೇಟ್ ಪ್ರಕಾಶ್ ಶೆಟ್ಟಿ ಅವರ ಶಿಷ್ಯೆ ಯಾದ ಮೇಲೆ ನನ್ನನು ಕಡೆಗಾಣಿಸತೊಡಗಿದಳು ಎಂಬ ವಿವರಗಳುಳ್ಳ 30 ಪುಟದ ದಾಖಲೆ ಹಾಗೂ ಸಾಕಷ್ಟು ಫೊಟೋಗಳನ್ನು ಇಟ್ಟುಕೊಂಡು ವಿಧಾನ ಸೌಧ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಡಿ ಅಶೋಕ್ ತನಿಖೆ ಮುಂದುವರೆಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X