ಶೈನಿ ನನ್ನ ಮಾನಭಂಗ ಮಾಡಿಲ್ಲ

ಮುಂಬೈ, ಸೆ.9: ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೀಡಾಗಿ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಬಾಲಿವುಡ್ ನಟ ಶೈನಿ ಅಹುಜಾ ಪ್ರಕರಣ ಹೊಸ ತಿರುವು ಪಡೆದಿದ್ದು, ಶೈನಿ ತನ್ನ ಮೇಲೆ ಅತ್ಯಾಚಾರ ನಡೆಸಿಲ್ಲ ಎಂದು ಅತ್ಯಾಚಾರಕ್ಕೀಡಾಗಿದ್ದಳು ಎನ್ನಲಾದ ಆತನ ಮನೆಕೆಲಸದಾಳು ಈಗ ಉಲ್ಟಾ ಹೊಡೆದಿದ್ದಾಳೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.3ರಂದು ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಶೈನಿ ತನ್ನ ಮೇಲೆ ಅತ್ಯಾಚಾರವೆಸಗಿಲ್ಲ ಎಂದು ಆತನ ವಿರುದ್ಧಅತ್ಯಾಚಾರ ದೂರು ನೀಡಿದ್ದ 20 ವರ್ಷದ ಮನೆಕೆಲಸದ ಯುವತಿ ಈ ಹಿಂದಿನ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾಳೆ.

ಕಳೆದ ವರ್ಷ ಜೂನ್‌ ನಲ್ಲಿ ಶೈನಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಆಕೆ, ಮುಂಬೈನ ಶೈನಿ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುವ ವೇಳೆ ತನ್ನ ಮೇಲೆ ಶೈನಿ ಅಹುಜಾ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಿದ್ದಳು. ಇದಾದ ನಂತರ ಶೈನಿಯನ್ನು ಬಂಧಿಸಲಾಗಿತ್ತು ಆತ ಅಕ್ಟೋಬರ್ 1ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಆದರೆ ಸೆ.3, 2010ರಂದು ಈ ಪ್ರಕರಣದ ವಿಚಾರಣೆ ನಡೆದಾಗ ಶೈನಿ ವಿರುದ್ಧ ದೂರು ನೀಡಿದ್ದ ಯುವತಿ ಉಲ್ಟಾ ಹೊಡೆದಿದ್ದಾಳೆ. ಮನೆಕೆಲಸದವಳಾದ ತನ್ನ ಮೇಲೆ ಶೈನಿ ಅತ್ಯಾಚಾರವೆಸಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ ಎಂದು ಸರ್ಕಾರಿ ವಕೀಲ ಕಾಶೀನಾಥ್ ದಿಂಗೇ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಈ ಹಿಂದಿನ ಆರೋಪವನ್ನು ಬದಲಾಯಿಸಿರುವ ಶೈನಿ ಮನೆಕೆಲಸದಾಳಿಗೆ ಸುಳ್ಳು ಸಾಕ್ಷ್ಯ ನುಡಿದ ಆರೋಪದ ಮೇಲೆ ನ್ಯಾಯಾಲಯ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ದಿಂಗೇ ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಇತರೆ ಸಾಕ್ಷಿಗಳ ವಿಚಾರಣೆ ಜತೆಗೆ,
ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಇತರೆ ದಾಖಲೆಗಳನ್ನು ಸಕಾರಿ ಪರ ವಕೀಲರು ಕೋರ್ಟ್‌ನಲ್ಲಿ ಹಾಜರುಪಡಿಸಲಿದ್ದಾರೆ.

ಸದ್ಯ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಸೆ.15ಕ್ಕೆ ಮುಂದೂಡಿದೆ. ಶೈನಿ ವಿರುದ್ಧ ಮುಂಬೈ ಪೊಲೀಸರು 109 ಪುಟಗಳ ಆರೋಪ ಪಟ್ಟಿಯನ್ನುಸಿದ್ಧಪಡಿಸಿದ್ದಾರೆ. ಒಂದೊಮ್ಮೆ ಆರೋಪ ಸಾಬೀತಾದಲ್ಲಿ ಶೈನಿಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+