ಅಯ್ಯೋ ರಾಮ ಮತ್ತೆ ಪೆಟ್ರೋಲ್ ಬೆಲೆ ಏರಿತಾ!

ತಡರಾತ್ರಿ 10 ಗಂಟೆಯ ನಂತರ ಕೇಂದ್ರ ಸರಕಾರದ ಈ ನಿರ್ಧಾರ ಹೊರಬಿದ್ದಿದೆ. ದಿಲ್ಲಿಯಲ್ಲಿ ಪೆಟ್ರೋಲ್ ದರ 11 ಪೈಸೆ ಹೆಚ್ಚಳವಾಗಿ ಲೀಟರ್‌ಗೆ 51.56 ರುಪಾಯಿ ಆಗಲಿದೆ. ಹಾಗೆಯೇ ಡೀಸೆಲ್ ಬೆಲೆ 9 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 37.71 ರುಪಾಯಿ ಆಗಿದೆ ಎಂದು ಇಂಧನ ಸಚಿವಾಲಯ ಮೂಲಗಳು ಹೇಳಿವೆ. ಇದೇ ರೀತಿ ದೇಶಾದ್ಯಂತ ಪೆಟ್ರೋಲ್ ಬೆಲೆ ಲೀಟರ್‌ಗೆ 11 ರಿಂದ 12 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ 9 ರಿಂದ 10 ಪೈಸೆ ಏರಿಕೆಯಾಗಲಿದೆ.












Click it and Unblock the Notifications