ಕಾಮನ್ ವೆಲ್ತ್ ನಲ್ಲಿ ಗೆದ್ದವರಿಗೆ 20 ಲ.ರು. ಬಹುಮಾನ
ನವದೆಹಲಿ,
ಸೆ. 8 : ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮುಂಬರುವ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಪಟು ಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯವು 20 ಲಕ್ಷ ರುಪಾಯಿ ನಗದು ಬಹುಮಾನ ನೀಡಲಿದೆ. id="toptextpromo">ಕ್ರೀಡಾ
ಸಚಿವ ಮನೋಹರ ಸಿಂಗ್ ಗಿಲ್ ಈ ವಿಷಯವನ್ನು ಘೋಷಿಸಿದ್ದಾರೆ. ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುವಿಗೆ ಹಿಂದೆ ಪ್ರಕಟಿಸಿದ್ದ ಬಹುಮಾನ ದುಪ್ಟಟ್ಟುಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, 10 ಲಕ್ಷ ರುಪಾಯಿಗಳ ಬಹುಮಾನವನ್ನು 20 ಲಕ್ಷ ರುಪಾಯಿಗಳಿಗೆ ಏರಿಸಲಾಗಿದೆ. ಬೆಳ್ಳಿ ಪದಕ ಗೆದ್ದವರಿಗೆ 5 ಲಕ್ಷ ರುಪಾಯಿಗಳ ಬದಲಾಗಿ 10 ಲಕ್ಷ ರುಪಾಯಿ ಹಾಗೂ ಕಂಚು ಗೆದ್ದವರಿಗೆ 6 ಲಕ್ಷ ರುಪಾಯಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಒಲಿಂಪಿಕ್ಸ್
ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಶೂಟರ್ ಅಭಿನವ ಬಿಂದ್ರಾ, ರಾಜವರ್ಧನ್ ಸಿಂಗ್, ಶೆಟ್ಲರ್ ಸೈನಾ ನೆಹ್ವಾಲ್ ಅವರಿಗೆ ಕ್ರೀಡಾ ಇಲಾಖೆ ಹೊರತುಪಡಿಸಿ ಕೇಂದ್ರ ಸರಕಾರ ಮತ್ತು ಆಯಾ ರಾಜ್ಯ ಸರಕಾರಗಳು ಭಾರಿ ಮೊತ್ತ ನೀಡುವ ಮೂಲಕ ಗೌರವಿಸಿವೆ.











Click it and Unblock the Notifications