ಮುಂಬೈ, ಸೆ.6: ಬೆಲೆ ಏರಿಕೆ, ಖಾಸಗಿ ಬ್ಯಾಂಕುಗಳ ಪರವಾನಗಿ ಮತ್ತಿತ್ತರ ವಿಷಯಗಳನ್ನು ವಿರೋಧಿಸಿ ಹಲವಾರು ಬ್ಯಾಂಕ್ ನೌಕರರ ಸಂಘಟನೆಗಳು ಮಂಗಳವಾರ ಮುಷ್ಕರ ನಡೆಸಲಿವೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಬೆಂಬಲ ದೊರೆತಿರುವುದರಿಂದ ರಾಷ್ಟ್ರವ್ಯಾಪಿ ಬ್ಯಾಂಕ್ ಗಳು ಮಂಗಳವಾರ ಮುಚ್ಚಲಿವೆ.
27 ಸಾರ್ವಜನಿಕ ವಲಯದ ಬ್ಯಾಂಕುಗು, 18 ವಿದೇಶಿ ಬ್ಯಾಂಕುಗಳು, 82 ಪ್ರಾದೇಶಿಕ ಬ್ಯಾಂಕುಗಳು, 1,721 ಸಹಕಾರಿ ಬ್ಯಾಂಕುಗಳು ಸುಮಾರು 10 ಲಕ್ಷ ನೌಕಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಸುಮಾರು 44 ಕೋಟಿ ನೌಕರರೂ ಮುಷ್ಕರ ಹೂಡಲಿದ್ದಾರೆ.