ಸೋನಿಯಾ ನಾಲ್ಕಲ್ಲ 40 ಸಲ ಅಧ್ಯಕ್ಷರಾಗ್ತಾರೆ!

ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ ಅವರು, ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ ಹಾಗೆ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಗೆ ನೀಡಲಿ ಎಂದು ಸವಾಲು ಹಾಕಿದ್ದರು. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಮಾದರಿಯಲ್ಲೇ ಕೆಲಸ ಮಾಡುತ್ತಿದೆ. ಜವಾಹರ್ ಲಾಲ್ ನೆಹರು 17 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿದ್ದು, ಕೂಡಾ ಇದೇ ಕಾಂಗ್ರೆಸ್ ದಿಂದ ಎನ್ನುವುದು ಮರೆಯಬಾರದು ಎಂದು ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಹೇಳಿದ್ದಾರೆ.
ಕಾಂಗ್ರೆಸ್‌ನ ಆಂತರಿಕ ಸಂವಿಧಾನದ ಪ್ರಕಾರ ಬ್ಲಾಕ್, ಜಿಲ್ಲೆ ಅಥವಾ ರಾಜ್ಯ ಘಟಕದ ಅಧ್ಯಕ್ಷರು ಎರಡು ಅವಧಿಗಿಂತ ಹೆಚ್ಚಿನ ಅವಧಿಗೆ ಅಧ್ಯಕ್ಷರಾಗಲು ಅವಕಾಶವಿಲ್ಲ. ಆದರೆ ಸೋನಿಯಾಗಾಂಧಿ ಸತತ ನಾಲ್ಕನೇ ಅವಧಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿಯ ಮುಖಂಡ ರವಿಶಂಕರ್ ಪ್ರಸಾದ್ ಹೇಳಿದ್ದರು.
ನಮ್ಮದು ಪ್ರಜಾಪ್ರಭುತ್ವವಿರುವ ಪಕ್ಷ ಎಂದು ಕಾಂಗ್ರೆಸ್ ಹೇಳುವುದು ನಿಜವೇ ಆದರೆ ಅದರ ಆಂತರಿಕ ಸಂವಿಧಾನ ರಾಷ್ಟ್ರೀಯ ಅಧ್ಯಕ್ಷರಿಗೂ ಅನ್ವಯವಾಗಬೇಕು. ಪ್ರಧಾನಮಂತ್ರಿ ಸ್ಥಾನವನ್ನು ಸೋನಿಯಾ ತ್ಯಾಗ ಮಾಡಿದರು ಎಂದು ಕಾಂಗ್ರೆಸ್ ನಾಯಕರು ಯಾವಾಗಲೂ ಹೇಳುತ್ತಾರೆ. ಪಕ್ಷದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆಯಿದ್ದರೆ ಗಾಂಧಿ ಕುಟುಂಬದ ಹೊರಗಿನವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಿ ಎಂದು ಪ್ರಸಾದ ಒತ್ತಾಯಿಸಿದರು.












Click it and Unblock the Notifications