ರೇಪ್ ಮಾಡಿದ್ದಕ್ಕೆ ರೈಲ್ವೆ ಸ್ಟೇಷನ್ ಸುಟ್ಟುಬೂದಿ

Crimebeat
ಸದಲ್ಪುರ್(ರಾಜಸ್ತಾನ), ಸೆ. 1 : ಅಪ್ರಾಪ್ತೆಯೊಬ್ಬಳ ಮೇಲೆ ರೈಲ್ವೆ ಇಲಾಖೆಯ ನೌಕರನೊಬ್ಬ ರೈಲ್ವೆಯ ಅತಿಥಿಗೃಹದಲ್ಲೇ ಅತ್ಯಾಚಾರ ಮಾಡಿದ್ದಕ್ಕಾಗಿ ರೊಚ್ಚಿಗೆದ್ದ ಜನರು ರೈಲ್ವೆ ಸ್ಟೇಷನ್ ಗೆ ಬೆಂಕಿ ಹಚ್ಚಿದ ಘಟನೆ ಬುಧವಾರ ನಸುಕಿನ ಜಾವ ರಾಜಸ್ತಾನ ಚೂರೂ ಜಿಲ್ಲೆಯ ಸದಲ್ಪುರ್ ಎಂಬಲ್ಲಿ ನಡೆದಿದೆ.

ಕಾರ್ಯ ನಿಮಿತ್ತ ಪೋಷಕರೊಂದಿಗೆ ತೆರಳುತ್ತಿದ್ದ 9 ವರ್ಷದ ಬಾಲಕಿಯೊಬ್ಬಳ ಮೇಲೆ ರೈಲ್ವೆ ಇಲಾಖೆಯಲ್ಲಿ ಇಲೆಕ್ಟೀಷಿಯನ್ ಆಗಿ ಕೆಲಸ ಮಾಡುತ್ತಿರುವ ಮನೋಜ್ ಮೀನಾ ಮತ್ತು ಆತನ ಸಂಬಂಧಿ ಜೈಸಿಂಗ್ ಮೀನಾ ಬಾಲಕಿಯನ್ನು ಅತಿಥಿಗೃಹಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಈ ಪ್ರಕರಣ ವ್ಯಾಪಕವಾಗುತ್ತಿದ್ದಂತೆಯೇ ಉದ್ರಿಕ್ತರ ಗುಂಪು ರೈಲ್ವೆ ಸ್ಟೇಷನ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಜನರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಪೇದೆಗಳನ್ನು ಮನಬಂದಂತೆ ಥಳಿಸಲಾಗಿದೆ.

ಅತ್ಯಾಚಾರದ ಆರೋಪಿಗಳಾದ ಮನೋಜ್ ಮೀನಾ, ಜೈಸಿಂಗ್ ಮೀನಾ ಹಾಗೂ ರೈಲ್ವೆ ಇಲಾಖೆ ಆಸ್ತಿ ಹಾಳು ಮಾಡಿದ 6 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+