ರೋಮ್ ಗೆ ಹೋಗಿ ಇಸ್ಲಾಂ ಸೇರಿ ಎಂದ ಮುಸ್ಲೀಮ

ಗಡಾಫಿ ಭಾಷಣವನ್ನು ಇಟಾಲಿಯನ್ ಕಾನೂನು ತಜ್ಞರು ತೀವ್ರವಾಗಿ ಖಂಡಿಸಿದ್ದರಲ್ಲದೆ, ಗಡಾಫಿ ಜೊತೆ ಅಗತ್ಯಕ್ಕಿಂತ ಹೆಚ್ಚಿನ ಸ್ನೇಹ ಒಳ್ಳೆಯದಲ್ಲ ಎಂದು ಇಟಲಿ ಪ್ರಧಾನಿ ಸಿಲ್ವಿಯೋ ಬರ್ಲೂಸ್ಕೋನಿಗೆ ಕಿವಿಮಾತು ಹೇಳಿದ್ದಾರೆ.
ಇಸ್ಲಾಂ ಅತ್ಯುನ್ನತವಾದ ಧರ್ಮ. ಏಕನಿಷ್ಠೆ ಹೊಂದಬೇಕಾದರೆ ನೀವು ಪ್ರವಾದಿ ಮೊಹಮ್ಮದ್ ರನ್ನು ಹಿಂಬಾಲಿಸಿರಿ ಎಂದು ಗಡಾಫಿ ಹೇಳಿದ್ದರು. ಅಲ್ಲದೆ 500 ಕ್ಕೂ ಹೆಚ್ಚು ಯುವತಿಯರಿಗೆ ಖುರಾನ್ ನ ಪ್ರತಿಗಳನ್ನು ನೀಡಿ ಯುರೋಪಿಯನ್ನರು ಆದಷ್ಟು ಬೇಗ ಇಸ್ಲಾಂ ಧರ್ಮಕ್ಕೆ ಸೇರಿದರೆ ಒಳಿತು ಎಂದಿದ್ದರು.
ಮತ ಪ್ರಚಾರವೆ ಗಡಾಫಿ ಉದ್ದೇಶ?: ರೋಮ್ ಜೊತೆಗಿನ ಸ್ನೇಹ ಒಪ್ಪಂದದ ಎರಡನೇ ವರ್ಷಾಚರಣೆ ಅಂಗವಾಗಿ ರೋಮ್‌ಗೆ ಭೇಟಿ ನೀಡಿದ್ದ ವೇಳೆಯೇ ಗಡಾಫಿ ಈ ಹೇಳಿಕೆ ನೀಡುವ ಮೂಲಕ ಸ್ನೇಹದ ಮೂಲಕ್ಕೇ ಪೆಟ್ಟು ನೀಡಿದ್ದಾರೆ. ಅಚ್ಚರಿಯ ಅಂಶವೆಂದರೆ ಈ ಯುವತಿಯರು ಅದರಲ್ಲೂ ವಿದ್ಯಾರ್ಥಿನಿಯರನ್ನು 70 ರಿಂದ 80 ಯೂರೋ ನೀಡಿ ಸಭೆಗೆ ಕರೆ ತರಲಾಗಿತ್ತು. ಸಾಂಪ್ರದಾಯಿಕ ಬಟ್ಟೆ ಧರಿಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿತ್ತು.
ಸೋಮವಾರ ರೋಮ್‌ನ ಲಿಬಿಯನ್ ಕಲ್ಚರಲ್ ಸೆಂಟರ್ ನಲ್ಲಿ ನಡೆದ ಗಡ್ಡಾಫಿಯ ಇಂತಹುದೇ ಇನ್ನೊಂದು ಸಭೆಗೆ 200 ಮಂದಿ ಮಹಿಳೆಯರನ್ನು ಸೇರಿಸಲಾಗಿತ್ತು. ಸಭೆಯಲ್ಲಿ ಇಸ್ಲಾಮಿನ ಪ್ರಚಾರವನ್ನೇ ಆತ ಮಾಡಿದ್ದು, ಮತ ಪ್ರಚಾರಕ್ಕಾಗಿ ಕೋಟ್ಯಾಂತರ ಹಣ ವ್ಯಯಿಸಲಾಗಿದೆ ಎಂದು ಇಟಲಿಯ ಪತ್ರಿಕೆಗಳು ಕಿಡಿಕಾರಿವೆ.
'ಈ ಉಪನ್ಯಾಸ ಯುರೋಪಿನ ಮಹಿಳೆಯರ ಘನತೆಗೇ ಮಾಡಿದ ಹೇಯ ಅವಮಾನವಾಗಿದೆ' ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಇಟೆಲಿ ಆರೋಗ್ಯ ಸಚಿವೆ ರೋಸಿ ಕಿಡಿ ಕಾರಿದ್ದಾರೆ. 'ಇದು ಯುರೋಪನ್ನು ಇಸ್ಲಾಮೀಕರಣಗೊಳಿಸುವ ದುಷ್ಟ ಹಾಗೂ ಅಪಾಯಕಾರಿ ಯೋಜನೆಯಾಗಿದೆ'ಎಂದು ಯುರೋಪಿನ ಸಂಸದ ಮಾರಿಯೋ ಬೊರ್ಗೇಝಿಯೊ ಹೇಳಿದ್ದಾರೆ.
ವ್ಯಾಟಿಕನ್‌ನ ಪೋಪ್ ದ್ವಿತೀಯ ಜಾನ್‌ಪಾಲ್ ಭಾರತಕ್ಕೆ ಬಂದಿದ್ದಾಗ ಭಾರತವನ್ನು ಕ್ರಿಶ್ಚಿಯನ್ ಮಯಗೊಳಿಸುವಂತೆ ಕ್ರೈಸ್ತ ಮಿಷನರಿಗಳಿಗೆ ಕರೆ ನೀಡಿ ಆತಿಥ್ಯ ನೀಡಿದ ದೇಶದ ಸೌಜನ್ಯಕ್ಕೇ ಪೆಟ್ಟು ನೀಡಿದ್ದರೆ, ಇದೀಗ ಗಡ್ಡಾಫಿ ಅದೇ ರೋಮ್‌ಗೆ ತೆರಳಿ ನೀಡಿರುವ ಹೇಳಿಕೆ ಕ್ರೈಸ್ತ ಜಗತ್ತಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications