ಆಸಿಫ್ ಗೆ ಬುಕ್ಕಿಯೊಂದಿಗೆ ಕನೆಕ್ಷನ್ : ವೀಣಾ ಮಲಿಕ್
ಲಾಹೋರ್,
ಆ. 31 : ಪಾಕಿಸ್ತಾನ ಕ್ರಿಕೆಟಿಗ ಮೊಹ್ಮದ್ ಅಸಿಫ್ ಬುಕ್ಕಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಹಾಗೂ ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲುದಾರರಾಗಿರುವ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂದು ಆಸಿಫ್ ಅವರ ಮಾಜಿ ಪ್ರೇಯಸಿ ವೀಣಾ ಮಲಿಕ್ ಸ್ಪಷ್ಟಪಡಿಸಿದ್ದಾರೆ. ಸ್ಪಾಟ್ ಫಿಕ್ಸಿಂಗ್ ನಡೆಸಲು ದೀಕ್ಷಿತ್ ಎಂಬ ಭಾರತೀಯ ಬುಕ್ಕಿಯೊಂದಿಗೆ ಹಣ ಪಡೆಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. id="toptextpromo">ಭಾರತೀಯ
ಬುಕ್ಕಿ ಮತ್ತು ಇತರೆ ಬುಕ್ಕಿಗಳೊಂದಿಗೆ ಆಸಿಫ್ ತನ್ನ ನೌಕರನ ಮೊಬೈಲ್ ಮೂಲಕ ವ್ಯವಹರಿಸುತ್ತಿದ್ದರು. ಈ ಬಗ್ಗೆ ನನ್ನಲ್ಲಿ ಸಾಕ್ಷ್ಯಾಗಳಿವೆ ಎಂದಿರುವ ವೀಣಾ ಮೊಬೈಲ್ ಕಿರುಸಂದೇಶಗಳಿರುವ ದಾಖಲೆಗಳನ್ನು ತೋರಿಸಿದ್ದಾರೆ. ಪಾಕಿಸ್ತಾನ 2010ರವರೆಗೆ ಯಾವುದೇ ಟೆಸ್ಟ್ ಸರಣಿಯನ್ನು ಜಯಸಿಲ್ಲ. ಆದರೆ, ಸ್ಪಾಟ್ ಫಿಕ್ಸಿಂಗ್ ಆಸಿಫ್ ಹಣ ಗಳಿಸಿರುವುದಕ್ಕೆ ತನ್ನ ಬಳಿ ಸಾಕ್ಷ್ಯಾಧಾರಗಳು ಇವೆ ಎಂದು ವೀಣಾ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಐಪಿಎಲ್
ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಆಸೀಫ್ ದೀರ್ಘಾವಧಿ ಅಮಾನತು ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡಿದ್ದರು ಎಂದು ಸಹ ವೀಣಾ ಆಪಾದಿಸಿದ್ದಾರೆ. ಇತ್ತೀಚೆಗೆ ಆಸಿಫ್ ಮದುವೆಯಾಗಿದ್ದರಿಂದ ವೀಣಾ ಅವರಿಂದ ದೂರವಾಗಿದ್ದಾರೆ.











Click it and Unblock the Notifications