ಫ್ರೆಂಚ್ ಪ್ರಥಮ ಮಹಿಳೆ ಬ್ರೂನಿ ವೇಶ್ಯೆ : ಇರಾನ್
ಟೆಹರಾನ್,
ಆ.31:ಇರಾನಿನಲ್ಲಿ ಕಲ್ಲೆಸೆದು ಕೊಲ್ಲುವ ಶಿಕ್ಷೆಗೀಡಾಗಿರುವ ಮಹಿಳೆಯ ಪರವಾಗಿ ನಿಂತು ಇರಾನ್ ಅನ್ನು ಟೀಕಿಸಿದ್ದ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿಯ ಪತ್ನಿ ಕಾರ್ಲಾ ಬ್ರೂನಿಯನ್ನು ಇರಾನ್ ನ ಪತ್ರಿಕೆಗಳು 'ವೇಶ್ಯೆ 'ಎಂದು ನಿಂದಿಸಿದೆ. id="toptextpromo">ಇರಾನಿನ
ಮುಸ್ಲಿಂ ಮಹಿಳೆ ಸಾಕಿನೇಹ್ ಮೊಹಮ್ಮದಿ ಅಸ್ತಿಯಾನಿ ತನ್ನ ಪತಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದು ಈಗ ಆಕೆಯನ್ನು ಕಲ್ಲೆಸೆದು ಸಾಯಿಸುವಂತೆ ಆದೇಶಿಸಲಾಗಿತ್ತು. ಈ ಕ್ರಮದ ವಿರುದ್ಧ ಫ್ರೆಂಚ್ ನಟಿ ಇಸಾಬೆಲ್ಲೆ ಅಡ್ಜಾನಿ (ಮಾಜಿ ಸೂಪರ್ ಮಾಡೆಲ್) ಸಹಿಸಂಗ್ರಹ ಅಭಿಯಾನ ನಡೆಸಿದ್ದು, ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿಯವರ ಪತ್ನಿ ಫ್ರೆಂಚ್ ಪ್ರಥಮ ಮಹಿಳೆ ಕಾರ್ಲಾ ಬ್ರೂನಿ -ಸರ್ಕೋಜಿ ಕೂಡಾ ಇದಕ್ಕೆ ಸಹಿ ಹಾಕಿದ್ದರು. id='are-slot-1' class='oiad oi-axt oiadv'> id='top-searched-articles'>ಇರಾನಿನ
ಕ್ರಮವನ್ನು ಬರ್ಬರ ಎಂದು ಟೀಕಿಸಿ ಮಹಿಳೆಯನ್ನು ಇಂತಹ ಕ್ರೂರ ಶಿಕ್ಷೆಯಿಂದ ಪಾರುಮಾಡುವಂತೆ ಕರೆ ನೀಡಿದ್ದರು. ಇದರಿಂದ ಕೆರಳಿದ ಇರಾನಿನ ಸರಕಾರಿ ಪತ್ರಿಕೆ ಕಯ್ಹಾನ್ ಬ್ರೂನಿ ಸರ್ಕೋಜಿ ಮತ್ತು ಇಸ್ಬೆಲ್ಲಾ ಅಡ್ಜಾನಿ ಅವರನ್ನು ವೇಶ್ಯೆಯರು ಎಂದು ದೂಷಿಸಿದೆ.ಇರಾನಿನ ಸರಕಾರಿ ಟಿವಿ ಕೂಡಾ ನಟಿಯನ್ನು ಅನೈತಿಕ ಮಹಿಳೆ ಎಂದು ನಿಂದಿಸಿದೆ.











Click it and Unblock the Notifications