ಬಡ್ತಿ ಬೇಕೇ? ಬಾಸ್ ಜೊತೆ ಸಹಕರಿಸಿ!

ಈ ಸರ್ವೇಯಲ್ಲಿ ಭಾಗವಹಿಸಿದ್ದ ಶೇ.37ರಷ್ಟು ಮಹಿಳಾ ಉದ್ಯೋಗಿಗಳು ತಮ್ಮ ಸ್ವಂತ ಅನುಭವದಿಂದ ಈ ಹೇಳಿಕೆ ನೀಡಿದ್ದಾರೆ. ಬಾಸ್ ಜೊತೆ ಸಹಕರಿಸಿದ ನಂತರ ತಮ್ಮ ವೇತನದಲ್ಲಿ ತುಂಬಾ ಬದಲಾವಣೆ ಆಗಿದೆಯೆಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕಂಪನಿಯ ಆಡಳಿತ ಮಂಡಳಿಯಲ್ಲಿರುವ ನಿರ್ದೇಶಕರು ಕೂಡಾ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಆಸಕ್ತಿದಾಯಕ ವಿಷಯವೆಂದರೆ, ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶೇ.61ರಷ್ಟು ಪುರುಷರು ಮತ್ತು ಶೇ.70ರಷ್ಟು ಮಹಿಳಾ ಉದ್ಯೋಗಿಗಳು ಮೇಲಾಧಿಕಾರಿಗಳಿಗೆ ಕಿಂಚಿತ್ ಗೌರವವನ್ನೂ ನೀಡುತ್ತಿಲ್ಲ.
ಅಲ್ಲದೇ ಶೇ.60ರಷ್ಟು ಪುರುಷರು ಮತ್ತು ಶೇ.65ರಷ್ಟು ಮಹಿಳಾ ಉದ್ಯೋಗಿಗಳು ಲೈಂಗಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಮಾತ್ರ ಕಂಪನಿಯಲ್ಲಿ ತಮ್ಮ ಕೆಲಸಕ್ಕೆ ಮಾನ್ಯತೆ ಸಿಗುವುದು ಮತ್ತು ವೇತನದಲ್ಲಿ ಹೆಚ್ಚಳವಾಗುವುದು ಎಂದು ನಂಬಿದ್ದಾರೆ. ಇಂತಹ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಕಚೇರಿ ಕೆಲಸದಲ್ಲಿ ಸರಿಯಾಗಿ ತೊಡಗಿಸಿಕೊಳ್ಳುವುದಿಲ್ಲ ಎಂದೂ ತಿಳಿದುಬಂದಿದೆ.
ಕಚೇರಿಯಲ್ಲಿ ನಡೆಯುವ ಈ ಚಟುವಟಿಕೆಗಳು ಕಂಪನಿಯ ಅಭಿವೃದ್ದಿಗೆ ಮಾರಕ. ಬಾಸ್ ಜೊತೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದ ನಂತರ ಬಾಸ್ ತಮ್ಮ ಪ್ರಭಾವ ತೋರಿಸಲಾರಂಭಿಸುತ್ತಾರೆ. ಇದು ಮದುವೆಯಾಗಿರುವ ಮಹಿಳೆಯರ ದಾಂಪತ್ಯ ಜೀವನಕ್ಕೆ ಮಾರಕ ಮತ್ತು ಕಚೇರಿಯ ವಾತಾವರಣ ಕೂಡ ಕಲುಷಿತಗೊಳಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲಿಗೆ ಬಂತು ನೋಡಿ ಪಾಶ್ಚಾತ್ಯ ಸಂಸ್ಕೃತಿ? ಇದೇ ಸಂಸ್ಕೃತಿ ಭಾರತದಲ್ಲಿಯೂ ಕಾಲಿಟ್ಟಿದ್ದರೆ ಆಶ್ಚರ್ಯವಿಲ್ಲ.











Click it and Unblock the Notifications