ಪಾಕ್ ಕಳ್ಳಾಟದಿಂದ ಕ್ರಿಕೆಟ್ ಗೆ ಕಳಂಕ

ಪಾಕಿಸ್ತಾನದ ವೇಗದ ಬೌಲರ್ ಗಳಾದ ಮೊಹಮ್ಮದ್ ಆಮೀರ್ ಹಾಗೂ ಮೊಹಮ್ಮದ್ ಆಸೀಫ್ 'ಸ್ಪಾಟ್ ಫಿಕ್ಸಿಂಗ್' ನಲ್ಲಿ ತೊಡಗಿರುವುದನ್ನು ದ ನ್ಯೂಸ್ ಆಫ್ ವರ್ಲ್ಡ್ ವರದಿ ಮಾಡಿದ್ದು, 35 ರ ಹರೆಯ ದ ಬುಕ್ಕಿ ಮಜಾರ್ ಮಜೀದ್ 1,50,000 ಪೌಂಡ್ ಹಣವನ್ನು ಆಟಗಾರರಿಗಾಗಿ ಪಡೆದಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಂಧಿತ ಬುಕ್ಕಿ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರಿಗೆ ಕೊಟ್ಟಿರುವ ಹೇಳಿಕೆ ಪ್ರಕಾರ, ಭಾರತದ ಬುಕ್ಕಿಗಳಿಗೆ ಹೆಚ್ಚೆಚ್ಚು ಹಣ ನೀಡಿದಷ್ಟು ಹೆಚ್ಚು ಮಾಹಿತಿಗಳನ್ನು ಪಡೆಯಬಹುದು. ನನ್ನ ವ್ಯವಹಾರದಲ್ಲಿ ಭಾರತದ ಬುಕ್ಕಿಗಳ ಪಾತ್ರ ದೊಡ್ಡದು ಎಂದಿದ್ದಾನೆ. ಕೆಲವೊಮ್ಮೆ 300,000 ಪೌಂಡುಗಳಿಂದ 450,000ಪೌಂಡುಗಳ ವರೆಗೆ ಹಣ ಕೈ ಬದಲಾಯಿಸುತ್ತದೆ. ಯಾವ ತಂಡ ಆಡುತ್ತಿದೆ ಎಂಬುದರ ಮೇಲೆ ಡೀಲ್ ದುಡ್ಡು ನಿರ್ಧಾರವಾಗುತ್ತದೆ ಎಂದು ಮಜೀದ್ ಹೇಳಿದ್ದಾನೆ.
ಮೊಹಮ್ಮದ್ ಆಸೀಫ್, ಮೊಹಮ್ಮದ್ ಆಮೀರ್, ಸಲ್ಮಾನ್ ಬಟ್ ಸೇರಿದಂತೆ ಇನ್ನು ನಾಲ್ಕು ಮಂದಿ ಪಾಕಿಸ್ತಾನಿ ಆಟಗಾರರು ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ತೊಡಗಿರುವುದನ್ನು ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಸ್ಪಷ್ಟಪಡಿಸಿದ್ದು, ಆಟಗಾರರ ವಿಚಾರಣೆ ಜಾರಿಯಲ್ಲಿದೆ.











Click it and Unblock the Notifications