ಪಾಕಿ ಆಟಗಾರರ ರೂಮಲ್ಲಿ ರೊಕ್ಕ ಸಿಕ್ತು?

ಉತ್ತರ ಲಂಡನ್ ನಲ್ಲಿರುವ ಸ್ವಿಸ್ ಕಾಟೇಜ್ ಹೋಟೆಲ್ ನಲ್ಲಿ ತಂಗಿರುವ ಪಾಕಿಸ್ತಾನಿ ಕ್ರಿಕೆಟಿಗರ ರೂಮ್ ಗಳನ್ನು ಸ್ಕಾಟ್ ಲ್ಯಾಂಡ್ ಪೊಲೀಸರು ಜಾಲಾಡುತ್ತಿದ್ದಾರೆ. ಸುಮಾರು ಎರಡು ಗಂಟೆಗಳು ಕಾಲ ಪೊಲೀಸರು ಆಟಗಾರರ ರೂಮುಗಳನ್ನು ತಪಾಸಣೆ ಮಾಡಿದ್ದಾರೆ. ಪಾಕಿಸ್ತಾನ ನಾಯಕ ಸಲ್ಮಾನ್ ಭಟ್, ಮೊಹ್ಮದ್ ಅಶೀಫ್ ಮತ್ತು ಮೊಹ್ಮದ್ ಅಮೀರ್ ಬಳಸುತ್ತಿದ್ದ ಮೊಬೈಲ್ ಸಿಮ್ ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಲಂಡನ್ ಮೂಲದ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನಿ ಆಟಗಾರರು ಕಳ್ಳಾಟದಲ್ಲಿ ಭಾಗಿಯಾಗಿರುವುದನ್ನು 'ದಿ ನ್ಯೂಸ್ ಆಫ್ ವರ್ಲ್ಡ್' ಪತ್ರಿಕೆ ಬಹಿರಂಗಪಡಿಸಿದ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ಹಿಂದೆ ಭಾರತೀಯ ಬುಕ್ಕಿಯೊಬ್ಬನ ಕೈವಾಡವಿರುವ ಅಂಶ ಕೂಡ ಬೆಳಕಿಗೆ ಬಂದಿತ್ತು.
ಪಾಕಿಸ್ತಾನದ ವೇಗದ ಬೌಲರ್ ಗಳಾದ ಮೊಹಮ್ಮದ್ ಆಮೀರ್ ಹಾಗೂ ಮೊಹಮ್ಮದ್ ಆಸೀಫ್ 'ಸ್ಪಾಟ್ ಫಿಕ್ಸಿಂಗ್' ನಲ್ಲಿ ತೊಡಗಿರುವುದನ್ನು ದ ನ್ಯೂಸ್ ಆಫ್ ವರ್ಲ್ಡ್ ವರದಿ ಮಾಡಿದ್ದು, 35 ರ ಹರೆಯ ದ ಬುಕ್ಕಿ ಮಜಾರ್ ಮಜೀದ್ 1,50,000 ಪೌಂಡ್ ಹಣವನ್ನು ಆಟಗಾರರಿಗಾಗಿ ಪಡೆದಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications