ಪೆಟ್ರೋಲ್ ಟ್ಯಾಂಕನ್ನು ಈವಾರವೇ ತುಂಬಿಸಿಟ್ಟುಕೊಳ್ಳಿ

ತೈಲ ಬೆಲೆ ನಿಯಂತ್ರಣ ರದ್ದತಿಯ ನಂತರ ಪ್ರತೀ ಲೀಟರ್ ಪೆಟ್ರೋಲಿಗೆ ರೂ 3.50 ದರ ಹೆಚ್ಚಳ ಆಗಿದ್ದು ಅಂತಾರಾಷ್ಟ್ರೀಯ ದರಗಳಿಗನುಗುಣವಾಗಿ ಬೆಲೆ ಏರಿಕೆ ಮಾಡಲು ಕಂಪನಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಕಂಪನಿಗಳು ದರ ಪರಿಷ್ಕರಣೆ ಮಾಡಲು ಪಾರದರ್ಶಕ ಹಾಗೂ ಮಾರುಕಟ್ಟೆ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ಸರಕಾರಿ ಸ್ವಾಮ್ಯದ ಕಂಪನಿಗಳು ಅಂತಾರಾಷ್ಟ್ರೀಯ ತೈಲ ಬೆಲೆಗಳ 15 ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ ಪೆಟ್ರೋಲ್ ಬೆಲೆ ಲೀಟರಿಗೆ 50 ಪೈಸೆ ಹಾಗೂ 30 ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ 70 ಪೈಸೆ ದರ ಏರಿಕೆ ಮಾಡಬೇಕಾಗುತ್ತದೆ.
ತೈಲ ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ, ಈಗಿನ ಲೋಕಸಭಾ ಅಧಿವೇಶನ ಆಗಸ್ಟ್ 31ಕ್ಕೆ ಮುಗಿಯಲಿದ್ದು ನಂತರ ಕಂಪನಿಗಳು ದರ ಏರಿಕೆ ಮಾಡಲಿವೆ. ಶೇ. 90ರಷ್ಟು ದೇಶದ ತೈಲ ಚಿಲ್ಲರೆ ಮಾರಾಟವನ್ನು ಸರಕಾರೀ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಹಿಂದುಸ್ಥಾನ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಳು ನಿಯಂತ್ರಿಸುತಿದ್ದು, ದರ ಏರಿಕೆಯಿಂದ ಖಾಸಗೀ ಕಂಪೆನಿಗಳಾದ ಎಸ್ಸಾರ್, ರಿಲಯನ್ಸ್ ಮತ್ತು ಶೆಲ್ ನ ವ್ಯಾಪಾರಕ್ಕೂ ತೊಂದರೆಯಾಗಲಿದ್ದು ಅವೂ ದರ ಏರಿಕೆ ಮಾಡಲೇಬೇಕಾಗುತ್ತದೆ.
ಸರಕಾರ ಡೀಸೆಲ್ ಮೇಲಿನ ಬೆಲೆ ನಿಯಂತ್ರಣವನ್ನು ತೆಗೆದು ಹಾಕುಬೇಕೆಂದೂ ಅವು ಒತ್ತಾಯಿಸುತ್ತಿವೆ. ದೇಶದ ತೈಲ ಮಾರಾಟದಲ್ಲಿ ಡೀಸೆಲ್ ನ ಪಾಲು ಶೇ. 40.3 ರಷ್ಟಿದೆ. ಪ್ರತೀ ಲೀಟರ್ ಡೀಸೆಲ್ ಮಾರಾಟದಿಂದ ಸರ್ಕಾರಿ ಕಂಪನಿಗಳು ರು. 2.50ರಷ್ಟು ನಷ್ಟ ಅನುಭವಿಸುತ್ತಿವೆ.












Click it and Unblock the Notifications