ಬಿಎಂಟಿಸಿಯಲ್ಲಿ ರು. 75 ಸಾವಿರ ಎಗರಿಸಿದ ಜೇಬುಗಳ್ಳರು

ಗುರುವಾರ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೆ ಬಸವರಾಜು ಎಂಬುವವರ ರು.75,000ಗಳನ್ನು ಜೇಬುಗಳ್ಳರು ಎಗರಿಸಿದ್ದಾರೆ. ಕೆಂಗೇರಿಯ ಮೇಗಲ ಬೀದಿಯವರಾದ ಬಸವರಾಜು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಕಲಾಸಿಪಾಳ್ಯ ಸಮೀಪ ಜೇಬುಗಳ್ಳರು ತಮ್ಮ ಕೈಚಳಕವನ್ನು ತೋರಿಸಿ ದುಡ್ಡನ್ನು ಲಪಟಾಯಿಸಿದ್ದಾರೆ.
ಚಿನ್ನವನ್ನ್ನು ಖರೀದಿಸಲು ಅವರು ಈ ಹಣವನ್ನು ಕೊಂಡೊಯ್ಯ್ಯುತ್ತಿದ್ದರು. ಕೆಂಗೇರಿಯಿಂದ ಚಿಕ್ಕಪೇಟೆಗೆ ಹೊರಟಿದ್ದ ಅವರ ಜೇಬಿಕೆ ಕತ್ತರಿ ಹಾಕಿದ ಕಳ್ಳರು ಅಷ್ಟು ಹಣವನ್ನು ಲಪಟಾಯಿಸಿರುವುದಾಗಿ ಬಸವರಾಜು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರತಿದಿನ ಬೆಂಗಳೂರಿನಲ್ಲಿ ಈ ರೀತಿಯ ಎಷ್ಟೋ ಪ್ರಕರಣಗಳು ನಡೆಯುತ್ತಲೇ ಇವೆ. ಭಾರಿ ಮೊತ್ತವನ್ನು ಕಳೆದುಕೊಂಡ ಪ್ರಯಾಣಿಕರು ಮಾತ್ರ ಪೊಲೀಸ್ ಠಾಣೆಯ ಮೆಟ್ಟಿಲನ್ನು ಹತ್ತುತ್ತಿದ್ದಾರೆ. ಉಳಿದವರು ನಿಸ್ಸಾಹಕರಾಗುತ್ತಿದ್ದಾರೆ. ಬಿಎಂಟಿಸಿ ಬಸ್ಸುಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಪಿಕ್ ಪಾಕೆಟ್ ದಂಧೆಯನ್ನು ಪೊಲೀಸರು ನಿಯಂತ್ರಿಸಬೇಕಾಗಿದೆ.











Click it and Unblock the Notifications