ಕಾಮನ್ ವೆಲ್ತ್ ಗೇಮ್ಸ್ ಹಣ ವ್ಯರ್ಥ: ಪ್ರೇಂಜಿ
ಬೆಂಗಳೂರು,
ಆ.26:ಕಾಮನ್ ವೆಲ್ತ್ ಕ್ರೀಡೆಯಿಂದ ಸುಮಾರು 28 ಸಾವಿರ ಕೋಟಿ ಸಾರ್ವಜನಿಕ ಹಣ ವ್ಯರ್ಥವಾಗಿ ಪೋಲಾಗುತ್ತಿದೆ . ಇದರಿಂದ ಸಾರ್ವಜನಿಕರಿಗೆ ಎಳ್ಳಷ್ಟು ಉಪಯೋಗವಿಲ್ಲ . ಕಾಮನ್ ವೆಲ್ತ್ ಗೇಮ್ಸ್ ಆಶಯಕ್ಕೆ ಧಕ್ಕೆ ಆಗಿದೆ ಎಂದು ವಿಪ್ರೋ ಕಂಪೆನಿ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅಭಿಪ್ರಾಯಪಟ್ಟಿದ್ದಾರೆ. id="toptextpromo">ಕಾಮನ್
ವೆಲ್ತ್ ಎಂಬುದು ಸಮಾಜ ಕಲ್ಯಾಣಕ್ಕಾಗಿ ಮೀಸಲಾದದ್ದು. ದೈಹಿಕ ಹಾಗೂ ಮಾನಸಿಕ ಸದೃಢ ಕ್ರೀಡಾಳುಗಳ ಉನ್ನತಿಯೊಂದಿಗೆ ಯಶಸ್ಸಿನ ಹಾದಿ ತೋರುವುದಾಗಿದೆ. ದೆಹಲಿ ಕಾಮನ್ ವೆಲ್ತ್ ಗೆ ಒಂದು ಅಂದಾಜಿನ ಪ್ರಕಾರ 11,494 ಕೋಟಿ ಹಣ ವ್ಯಯಿಸಲಾಗಿದೆ. ಮೊದಲಿಗೆ ಕೇವಲ 655 ಕೋಟಿ ರು ವ್ಯಯಿಸುವುದಾಗಿ ಹೇಳಲಾಗಿತ್ತು. ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಾಗಿ ದೆಹಲಿ ಸರ್ಕಾರ ಹೆಚ್ಚುವರಿ 16,560 ಕೋಟಿ ರು ಗಳನ್ನು ಖರ್ಚು ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಕ್ರೀಡಾಗ್ರಾಮದ
ರಸ್ತೆ, ವಿಮಾನ ಟರ್ಮಿನಲ್, ಹೊಸ ಮೇಲ್ಸೇತುವೆ , ಮೆಟ್ರೋ ರೈಲು ಇನ್ನಿತರ ಕಾಮಗಾರಿಗಳಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರಿಗೆ ಕಡಿಮೆ ಸಂಬಳ ನೀಡಲಗಿದೆ, ಅಪಾಯಕಾರಿ ಸ್ಥಿತಿಯಲ್ಲಿ ಎಷ್ಟೋ ಜನ ಕೆಲಸ ಮಾಡುತ್ತಿರುವುದು ವರದಿಯಾಗಿದೆ. ಕ್ರೀಡೆಯನ್ನು ಪ್ರೋತ್ಸಾಹಿಸುವ ರೀತಿ ಇದಲ್ಲ ಎಂದು ಪ್ರೇಂಜಿ ಹೇಳಿದ್ದಾರೆ.











Click it and Unblock the Notifications