ಭುವನಸುಂದರಿ ಕಿರೀಟ ಧರಿಸಿದ ಮೆಕ್ಸಿಕೋ ಸುಂದರಿ
ಲಾಸ್
ವೆಗಾಸ್, ಆ. 24 : ಮೆಕ್ಸಿಕೋ ಸುಂದರಿ ಜಿಮೇನಾ ನವರಾಟ್ 2010ರ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಜಮೈಕಾದ ಯಂಡೀ ಪಿಲಿಫ್ ಪ್ರಥಮ ರನ್ನರ್ ಆಫ್ ಆದರೆ, ಆಸ್ಟ್ರೇಲಿಯಾದ ಜಸ್ಟಿನ್ ಕ್ಯಾಂಬೆಲ್ ದ್ವಿತೀಯ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡರು. id="toptextpromo">ಅಮೆರಿಕಾದ
ಲಾಸ್ ವೆಗಾಸ್ ನಲ್ಲಿ ಸೋಮವಾರ ನಡೆದ ವರ್ಣರಂಜಿತ ಭುವನ ಸುಂದರಿಯರ ಸ್ಪರ್ಧೆಯಲ್ಲಿ 2009ರ ಸಾಲಿನ ಭವನಸುಂದರಿ ವೆನೆಜುವೆಲ್ ನ ಸ್ಟಿಪಾನಿಯಾ ಫರ್ನಾಂಡಿಸ್ ಅವರು 2010ರ ಸಾಲಿನಲ್ಲಿ ಭುವನಸುಂದರಿಯಾಗಿ ಆಯ್ಕೆಯಾಗಿರುವ ಮೆಕ್ಸಿಕೋದ ಜಿಮೇನಾ ನವರಾಟ್ ಅವರಿಗೆ ಕಿರೀಟ ಧರಿಸಿದರು. ಸುಮಾರು 83 ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. id='are-slot-1' class='oiad oi-axt oiadv'> id='top-searched-articles'>ಅಮೆರಿಕಾ,
ಐರ್ಲೆಲ್ಯಾಂಡ್ ಅಥವಾ ವೆನೆಜುವೆಲ್ ನ ಸುಂದರಿಯರು ಈ ಸಲದ ಭುವನಸುಂದರಿ ಪಟ್ಟವನ್ನು ಅಲಂಕರಿಸುತ್ತಾರೆ ಎಂದು ಭವಿಷ್ಯ ನುಡಿಯಲಾಗಿತ್ತು. ಆದರೆ, ಇದೆಲ್ಲವನ್ನೂ ಸುಳ್ಳಾಗಿಸಿದ 22 ರ ಹರೆಯದ ಮೆಕ್ಸಿಕೋದ ಜಿಮೇನಾ ನವರಾಟ್ ಅವರು ಭುವನಸುಂದರಿ ಪ್ರಶಸ್ತಿ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.











Click it and Unblock the Notifications