ಎಸ್ ಬಿಎಂ ಎಟಿಎಂ ದರೋಡೆಗೆ ವಿಫಲ ಯತ್ನ

SBM ATM robbery
ಬೆಂಗಳೂರು, ಆ.23: ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗೆ ನುಗ್ಗಿದ ಮುಸುಕುಧಾರಿಗಳು ಹಣ ದೋಚಲು ವಿಫಲ ಯತ್ನ ನಡೆಸಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.

ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ ಎಂಟಿ ಮುಖ್ಯರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್ ಬಿಎಂ) ಗೆ ಸೇರಿದ ಎಟಿಎಂ ಅನ್ನು ಕದ್ದೊಯ್ಯಲು ವಿಫಲ ಯತ್ನ ನಡೆದಿದೆ.

ರಾತ್ರಿ ಸುಮಾರುಮೂರು ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮುಸುಕುಧಾರಿ ದುಷ್ಕರ್ಮಿಗಳು ಎಟಿಎಂ ಕೇಂದ್ರದದಲ್ಲಿ ಹಣವಿರುವ ಬಾಕ್ಸ್ ತೆರೆಯಲು ಯತ್ನಿಸಿದಾಗ ಸದ್ದು ಕೇಳಿಸಿಕೊಂಡ ಎರಡನೇ ಮಹಡಿಯಲ್ಲಿದ್ದ ಮತ್ತೊಂದು ಸಂಸ್ಥೆಯ ಭದ್ರತಾ ಸಿಬ್ಬಂದಿ ಕೂಗಿಕೊಂಡಿದ್ದಾರೆ. ರಾತ್ರಿ ಗಸ್ತಿನಲ್ಲಿದ್ದ ಪೂಲೀಸರೂ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.

ಆದರೆ, ದುಷ್ಕರ್ಮಿಗಳು ಆವೇಳೆಗೆ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.ಸಿಸಿಟಿವಿ ಕೆಮೆರಾದಲ್ಲಿ ದುಷ್ಕರ್ಮಿಗಳ ಚಲನವಲನಗಳನ್ನು ಸೆರೆಹಿಡಿಯಲಾಗಿದೆ. ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+