ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದರ ಸಂಬಳ ಮತ್ತೆ 10 ಸಾವಿರ ರು ಹೆಚ್ಚಳ

By Mahesh
|
Google Oneindia Kannada News

Parliamentarians to get additional perks of Rs 10,000
ನವದೆಹಲಿ, ಆ.23: ಸುಮಾರು ಶೇ.300ರಷ್ಟು ವೇತನ ಹೆಚ್ಚಳ ಸಿಕ್ಕರೂ ತೃಪ್ತಿಗೊಳ್ಳದ ಸಂಸದರ ಬೇಡಿಕೆಗೆ ಮಣಿದಿರುವ ಕೇಂದ್ರ ಸಚಿವ ಸಂಪುಟ, ಮತ್ತೆ 10 ಸಾವಿರಗಳ ಹೆಚ್ಚುವರಿ ಭತ್ಯೆಯನ್ನು ಇಂದು ಘೋಷಿಸಿದೆ.

ಸಂಸದರ ಸಂಬಳ ತಿಂಗಳಿಗೆ 16,000 ರುಪಾಯಿಗಳಿಂದ 50, 000 ರುಗಳಿಗೆ ಹೆಚ್ಚಳಗೊಂಡಿತ್ತು. ಆದರೆ ಸಂಸದೀಯ ಸಮಿತಿಯ ಶಿಫಾರಾಸ್ಸಿನಂತೆ 80,001 ರು ನೀಡಬೇಕು ಎಂದು ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಂಸದರು ಪ್ರತಿಭಟಿಸಿದ್ದರು.

ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಪುಟ ಸಭೆ ಕೈಗೊಂಡು, 10 ಸಾವಿರ ರು ಹೆಚ್ಚಳ ಮಾಡಲು ನಿರ್ಧರಿಸಲಾಯಿತು.

50,000 ವೇತನ, ಕ್ಷೇತ್ರ ಭತ್ಯೆ 45,000, ಕಚೇರಿ ವೆಚ್ಚ 45,000 ಮತ್ತು ದಿನ ಭತ್ಯೆ 2,000 ರೂಪಾಯಿ ಸೇರಿದಂತೆ ಸಂಸದರು ಒಟ್ಟಾರೆ ಮಾಸಿಕ 1.6 ಲಕ್ಷ ರೂಪಾಯಿಗಳನ್ನು ವೇತನ ಮತ್ತು ಭತ್ಯೆಗಳ ರೂಪದಲ್ಲಿ ಪಡೆದುಕೊಳ್ಳಲಿದ್ದಾರೆ.

ಸಂಸದರಿಗೆ ಸಿಗುವ ಸೌಲಭ್ಯಗಳು: 50,000 ಮೂಲ ವೇತನ, ಕ್ಷೇತ್ರ ಭತ್ಯೆ 45,000, ಕಚೇರಿ ವೆಚ್ಚ 45,000 ಮತ್ತು ದಿನ ಭತ್ಯೆ 2,000 ರೂಪಾಯಿ ಸೇರಿದಂತೆ ಸಂಸದರು ಒಟ್ಟಾರೆ ಮಾಸಿಕ 1.6 ಲಕ್ಷ ರೂಪಾಯಿಗಳನ್ನು ವೇತನ ಮತ್ತು ಭತ್ಯೆಗಳ ರೂಪದಲ್ಲಿ ಪಡೆದುಕೊಳ್ಳಲಿದ್ದಾರೆ.

ದೆಹಲಿಯಲ್ಲಿನ ಬಂಗಲೆ, ಉಚಿತ ವಾಯುಯಾನ ಮತ್ತು ರೈಲ್ವೇ ಪ್ರಯಾಣ ಮುಂತಾದ ಸೌಲಭ್ಯಗಳು ಮೇಲಿನ ಭತ್ಯೆಗಳ ಪಟ್ಟಿಯಲ್ಲಿ ಸೇರುವುದಿಲ್ಲ. ಹೆಂಡತಿ-ಮಕ್ಕಳು ಮತ್ತು ತಮ್ಮ ಸಿಬ್ಬಂದಿಗಳೊಂದಿಗೆ ಸಂಸದರು ರೈಲಿನಲ್ಲಿ ಎಷ್ಟು ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

50,000 ಯೂನಿಟ್ ವಿದ್ಯುತ್ ಅಥವಾ 1,80,000 ರು ಪ್ರತಿ ತಿಂಗಳಿಗೆ ಮತ್ತು 4 ಸಾವಿರ ಕಿಲೋ ಲೀಟರ್ ನೀರು (ರು. 40,000). ದೆಹಲಿಯ ಅಧಿಕೃತ ನಿವಾಸದಿಂದ ತಮ್ಮ ಕ್ಷೇತ್ರಕ್ಕೆ ರಸ್ತೆ ಮೂಲಕ ತೆರಳಿದರೆ 16 ರು/ ಕಿ.ಮೀ ನಂತೆ ಹಣ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X