ವಿರೋಧದ ನಡುವೆಯೂ ವೀಸಾ ಶುಲ್ಕ ಏರಿಕೆ

ಭಾರತೀಯ ಕಂಪನಿಗಳಿಗೆ ಹೊಡೆತ ನೀಡುವ ಈ ಮಸೂದೆಗೆ ಆಕ್ಷೇಪ ವ್ಯಕ್ತವಾದರೂ ನಿರ್ಲಕ್ಷಿಸಿರುವ ಅಮೆರಿಕವು ಈ ಶುಲ್ಕವನ್ನು ತೀವ್ರವಾಗಿ ಏರಿಸಿದೆ.
ಇದು 2014ರ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಶನ್ ಸರ್ವೀಸಸ್(USCIS) ಹೇಳಿದೆ. ಭಾರತೀಯ ಕಂಪನಿಗಳು ಇದರಿಂದಾಗಿ ವಾರ್ಷಿಕ 250ಮಿ.ಡಾಲರ್ ಹೆಚ್ಚು ತೆರಬೇಕಾಗಿದೆ. ಇದರಿಂದ 600 ಮಿಲಯನ್ ಡಾಲರ್ ಸಂಗ್ರಹಿಸಲು ಅಮೆರಿಕ ಉದ್ದೇಶಿಸಿದೆ.
ಭಾರತ, ಚೀನಾ ವಿರೋಧ: ಎಚ್ 1 ಬಿ ವೀಸಾ ಶುಲ್ಕ ಏರಿಕೆ ವಿರೋಧಿಸಿ ವರ್ಲ್ಡ್ ಟ್ರೆಡ್ ಆರ್ಗನೈಸೇಷನ್(WTO) ಗೆ ದೂರು ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಭಾರತದ ರಾಜ ತಾಂತ್ರಿಕ ಅಧಿಕಾರಿಗಳೊಡನೆ ಮಾತುಕತೆ ನಡೆಸುವುದಾಗಿ ಅಮೆರಿಕದ ಆಡಳಿತ ಮಂಡಳಿ ಹೇಳಿದೆ.












Click it and Unblock the Notifications