'ರಾಹುಲ್ ಒಂದು ದಿನ ಪ್ರಧಾನಿ ಆಗೇ ಆಗುತ್ತಾರೆ'

ಹೀಗೆಂದು ಹೇಳಿದ್ದು ಮತ್ತಾರೂ ಅಲ್ಲ, ರಾಜಕಾರಣವೆಂದರೆ ಮಾರುದೂರ ಹಾರುವ, ಚಿತ್ರಪ್ರೇಮಿಗಳ ಕಣ್ಮಣಿಯಾಗಿರುವ ಯುವ ತಾರೆ ದೀಪಿಕಾ ಪಡುಕೋಣೆ. ದೂರದರ್ಶನಕ್ಕೆ ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ತಮ್ಮ ಮನದ ಇಂಗಿತವನ್ನು ಹೊರಹಾಕಿದ್ದಾರೆ.
ನನಗೆ ರಾಜಕೀಯದ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ಆದರೆ, ಅವರನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಅವರಲ್ಲೇನೋ ಆಕರ್ಷಣೆ ಇರುವುದು ಗೊತ್ತಾಗುತ್ತದೆ. ಎಲ್ಲೇ ಹೋಗಲಿ, ಏನೇ ಮಾಡುತ್ತಿರಲಿ ಅವರು ಯುವಕರನ್ನು ಸೆಳೆಯುತ್ತಿದ್ದಾರೆ ಎಂದು ದೀಪಿಕಾ ಏಕ್ ಮುಲಾಕಾತ್ ಎಂಬ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅವರ ನಡೆನುಡಿ, ವಿಚಾರಗಳು ಸಾಂಪ್ರದಾಯಿಕವಾಗಿದ್ದರೂ ಭವಿಷ್ಯದ ದೃಷ್ಟಿಕೋನ ಹೊಂದಿದ್ದಾರೆ. ಇದು ನಮ್ಮ ರಾಷ್ಟ್ರಕ್ಕೆ ಅತಿ ಮುಖ್ಯವಾದುದು ಎಂದು ದೀಪಿಕಾ ನುಡಿದಿದ್ದಾರೆ. ಈ ಸಂದರ್ಶನ ಶನಿವಾರ, ಆಗಸ್ಟ್ 21ರಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ.












Click it and Unblock the Notifications