ನ್ಯೂಯಾರ್ಕ್ ನಗರಕ್ಕೆ ಭಾರತದ ತೆರಿಗೆ ಬಾಕಿ ಇಲ್ಲ

India wins property tax battle with NY
ನ್ಯೂಯಾರ್ಕ್, ಆ.19: ಭಾರತ ಹಾಗೂ ಇನ್ನಿತರ ದೇಶಗಳು ನ್ಯಾಯಾರ್ಕ್ ನಗರದಲ್ಲಿ ಹೊಂದಿರುವ ರಾಜತಾಂತ್ರಿಕ ಕಟ್ಟಡಗಳ ಬಳಕೆ ಸಂಬಂಧ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಇಲ್ಲಿನ ನ್ಯಾಯಾಲಯವೊಂದು ತೀರ್ಪಿತ್ತಿದೆ.

ಈ ಹಿಂದೆ ನ್ಯೂಯಾರ್ಕ್ ನಗರ ಆಡಳಿತ ಭಾರತ ಕಟ್ಟಡ ತೆರಿಗೆ ಬಾಕಿ 42.4 ಮಿಲಿಯನ್ ಡಾಲರ್ ಗಳನ್ನು ನೀಡಬೇಕೆಂದು ನೋಟೀಸ್ ನೀಡಿತ್ತು. 2009ರಲ್ಲಿ ಸರ್ಕಾರದ ಇಲಾಖೆ ವಿದೇಶಿ ಸರ್ಕಾರ ಹಾಗೂ ವಿಶ್ವಸಂಸ್ಥೆ ತಮ್ಮ ಸಿಬ್ಬಂದಿ ಹಾಗೂ ಕಚೇರಿಗಳ ಬಳಕೆಗೆ ಕಟ್ಟಡ ತೆರಿಗೆ ನೀಡಬೇಕಿಲ್ಲ ಎಂದು ರಿಯಾಯ್ತಿ ನೀಡಿತ್ತು.

ಈ ಕುರಿತ ಪ್ರಕರಣದ ವಿಚಾರಣೆ ನಡೆಸಿದ ಮ್ಯಾನ್ ಹಟನ್ ನ ತ್ರಿ ಸದಸ್ಯ ಪೀಠದ ಉನ್ನತ ನ್ಯಾಯಾಲಯ ವಿದೇಶಿ ಸರ್ಕಾರಗಳು ಹೊಂದಿರುವ ಕಟ್ಟಡಗಳ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಪರಮಾಧಿಕಾರ ಹೊಂದಿದ್ದು, ಇದು ವಿದೇಶಿ ಸಂಬಂಧಗಳನ್ನೂ ಒಳಗೊಂಡಿರುವುದರಿಂದ ಇದನ್ನು ಪ್ರಶ್ನಿಸಲಾಗದು ಎಂದಿದೆ.

2008ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾನ್ ಹಟನ್ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರು ಭಾರತ ಈ ಸಂಬಂಧ 42.4 ಮಿಲಿಯ ಡಾಲರ್ ಹಾಗೂ ಮಂಗೋಲಿಯಾ 4.3 ಮಿಲಿಯ ಡಾಲರ್ ತೆರಿಗೆ ಪಾವತಿಸುವಂತೆ ಆದೇಶಿಸಿದ್ದರು.

ಅಮೆರಿಕಾದ ಫೆಡರಲ್ ಸರ್ಕಾರದ ಅಧಿಕಾರಿಗಳು ಕಳೆದ ವರ್ಷ ಕಟ್ಟಡ ತೆರಿಗೆ ರಿಯಾಯಿತಿ ನೀಡಿದ್ದು, ವಿದೇಶಿ ಸರ್ಕಾರಗಳ ಕಟ್ಟಡಗಳಿಗೆ ತೆರಿಗೆ ವಿಧಿಸಿದರೆ, ಅಮೆರಿಕಾ ವಿದೇಶಗಳಲ್ಲಿ ಹೊಂದಿರುವ ತನ್ನ ಕಟ್ಟಡಗಳಿಗೆ ಲಕ್ಷಾಂತರ ಡಾಲರ್ ತೆರಿಗೆ ನೀಡಬೇಕಾಗುತ್ತದೆ ಎಂದು ವಾದಿಸಿದ್ದರು.

2003ರಿಂದಲೇ ನ್ಯಾಯಾರ್ಕ್ ನಗರ ಆಡಳಿತ ಆಸ್ತಿ ತೆರಿಗೆ ಪಾವತಿಸುವಂತೆ ವಿದೇಶಿ ಸರ್ಕಾರಗಳಿಗೆ ನೋಟಿಸ್ ನೀಡಿತ್ತು. ನ್ಯೂಯಾರ್ಕ್ ನಲ್ಲಿ ಭಾರತ 26 ಅಂತಸ್ತುಗಳ ಕಟ್ಟಡ ಹೊಂದಿದ್ದು ಇದರಲ್ಲಿ ಆರನ್ನು ಮಾತ್ರ ರಾಜತಾಂತ್ರಿಕ ಕಚೇರಿಗಳಿಗೆ ಬಳಸುತ್ತಿರುವುದರಿಂದ ಉಳಿದ20೦ ಕ್ಕೆ ಆಸ್ತಿ ತೆರಿಗೆ ಪಾವತಿಸುವಂತೆ ನ್ಯೂಯಾರ್ಕ್ ಆಡಳಿತ ಭಾರತಕ್ಕೆ ಆಗ್ರಹಿಸಿತ್ತು.

ಇದನ್ನು ಪ್ರಶ್ನಿಸಿ ಭಾರತ ನ್ಯಾಯಾಲಯದ ಮೊರೆ ಹೋಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವುದಾಗಿ ನ್ಯೂಯಾರ್ಕ್ ಆಡಳಿತ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+