ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್ ವೆಲ್ತ್ ಕ್ರೀಡೆಗೆ 13 ಕ್ರೀಡಾಳು ಆಯ್ಕೆ

By Mrutyunjaya Kalmat
|
Google Oneindia Kannada News

Commonwealth Games logo
ಬೆಂಗಳೂರು, ಆ. 18 : ನವದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಕರ್ನಾಟಕದಿಂದ ದಾಖಲೆಯ ಸಂಖ್ಯೆಯ ಅಥ್ಲೀಟುಗಳು ಆಯ್ಕೆಯಾಗಿದ್ದಾರೆ. ಇದುವರೆಗೂ 11 ಅಥ್ಲೀಟುಗಳು ಮತ್ತು ಇಬ್ಬರು ಈಜುಗಾರರು ಆಯ್ಕೆಯಾಗಿರುವುದು ಕರ್ನಾಟಕದ ಮಟ್ಟಿಗೆ ದಾಖಲೆಯಾಗಿದೆ.

ಪ್ರಮೀಳಾ ಅಯ್ಯಪ್ಪ(ಹೆಫ್ಟಾತ್ಲಾನ್) ಕಾವ್ಯ ಮುತ್ತಣ್ಣ(ಜಾವಲಿನ್ ಥ್ರೋ), ಅಶ್ವಿನಿ ಎ(ರಿಲೇ), ಎಚ್ ಎಂ ಜ್ಯೋತಿ(100, 200ಮೀ ಮತ್ತು ರಿಲೇ), ಸಹನಾ ಕುಮಾರಿ(ಹೈಜಂಪ್), ರೆಬೆಕಾ ಜೋಸ್(ರಿಲೇ), ಬಿ ಜಿ ನಾಗರಾಜ್(ರಿಲೇ), ವಿಕಾಸ್ ಗೌಡ(ಡಿಸ್ಕಸ್, ಶಾಟ್ ಪುಟ್), ಕಾಶೀನಾಥ(ಜಾವಲಿನ್ ಥ್ರೋ) ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ಕ್ರೀಡಾಳುಗಳು. ಈಚು ವಿಭಾಗದಲ್ಲಿ ಗಗನ್ ಎಪಿ ಹಾಗೂ ರೋಹಿತ್ ಹವಾಲ್ದರ್ ಈಗಾಗಲೇ ಆಯ್ಕೆಯಾಗಿದ್ದು, ರೆಹಾನ್ ಪೂಂಚಾ ಆಯ್ಕೆ ನಿರೀಕ್ಷೆಯಲ್ಲಿದ್ದಾರೆ.

ಭಾರತದ 9 ಮಂದಿ ಅಥ್ಲೀಟುಗಳ ರಷ್ಯಾದ ಉಕ್ರೈನ್ ನಲ್ಲಿ ತರಬೇತಿ ಪಡೆಯಲು ತೆರಳುತ್ತಿದ್ದಾರೆ. ಭಾರತದಿಂದ 9 ಮಂದಿಗೆ ಅಥ್ಲೀಟುಗಳಿಗೆ ರಷ್ಯಾದಲ್ಲಿ ತರಬೇತಿ ಪಡೆಯುವ ಸಿಕ್ಕಿದೆ. ಒಂದು ತಿಂಗಳ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುತ್ತೇವೆ. ಏಷ್ಯನ್ ಗ್ರಾನ್ ಫ್ರಿ ಯಲ್ಲಿ ಉತ್ತಮ ಸಾಧನೆ ತೋರಿದ್ದಕ್ಕಾಗಿ ಕಾಮನ್ ವೆಲ್ತ್ ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ ಎಂದು ಅಥ್ಲೀಟು ಜ್ಯೋತಿ ಹೇಳಿದರಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X